ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಡಿ. 5ರ೦ದು ಗು೦ಡಿಬೈಲಿನ ಉಡುಪಿ ಮೋಟರ್ಸ್ ನಲ್ಲಿ ಯಮಹಾ ಕಂಪೆನಿಯ ರೆಟ್ರೋ ಮೊಡೆಲ್ ಬೈಕ್ ‘ಎಕ್ಸ್ಎಸ್ಆರ್ 155 ಮಾರುಕಟ್ಟೆ ಬಿಡುಗಡೆ…
ಉಡುಪಿ: ಬಹುಜನರ ನಿರೀಕ್ಷೆಯ ಹಾಗೂ ಜನರಿಂದ ಭಾರೀ ಬೇಡಿಕೆ ಇರುವ ಯಮಹಾ ಕಂಪೆನಿಯ ಹೊಸ ರೆಟ್ರೋ ಮೊಡೆಲ್ ಬೈಕ್ ‘ಎಕ್ಸ್ಎಸ್ಆರ್ 155•, ಡಿ. 5ರಂದು ಬೆಳಿಗ್ಗೆ 10.30ಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ಕಲ್ಸಂಕ-ಗುಂಡಿಬೈಲು ರಸ್ತೆಯ ಸುರಭಿ ಆರ್ಕೇಡ್ ನಲ್ಲಿರುವ ಯಮಹ ಅಧಿಕೃತ ಡೀಲರ್ ಉಡುಪಿ ಮೋಟಾರ್ಸ್ ನಲ್ಲಿ ನಡೆಯುವ ಸಮಾರಂಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು XSR 155 ಹಾಗೂ FZ ರೇವ್ ಬೈಕುಗಳನ್ನು ಬಿಡುಗಡೆಗೊಳಿಸಲಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಶಾಖೆಯ ಚೀಫ್ ಮ್ಯಾನೇಜರ್ ವಿನೋದ್ ಕುಮಾರ್ ಹಾಗೂ ಶಟರ್ ಬಾಕ್ಸ್ ಫಿಲ್ಮ್ಸ್ ನ ಯೂಟ್ಯೂಬರ್ ಸಚಿನ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪ್ರಥಮ ಗ್ರಾಹಕರಿಗೆ ಬೈಕುಗಳನ್ನು ಹಸ್ತಾ೦ತರಿಸಲಿದ್ದಾರೆ.
XSR 115 ಬೈಕುಗಳು ಲಿಕ್ವಿಡ್ ಕೋಲ್ಡ್, ಬ್ಲೂ ಕೋರ್, ಪೋರ್ ವಾಲ್ವ್ ಇಂಜಿನ್ ಹೊಂದಿದ್ದು, ರೆಟ್ರೋ ಶೇಪ್ ನಿಂದಾಗಿ ಆಕರ್ಷಣೀಯವಾಗಿವೆ.
XSR 115 ಬೈಕುಗಳು ವಿವಿಡ್ ರೆಡ್, ರೇಸಿಂಗ್ ಬ್ಲೂ, ಮ್ಯಾಟ್ ಟೈಟನ್ ಗ್ರೀನ್ ಹಾಗೂ ಮೆಟಾಲಿಕ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಉಡುಪಿಯಲ್ಲಿ ಈಗಾಗಲೇ 50ಕ್ಕೂ ಹೆಚ್ಚಿನ XSR 155 ಬೈಕುಗಳು ಬುಕ್ಕಿಂಗ್ ಆಗಿವೆ. ಯಮಹಾ ಕಂಪೆನಿಯವರು ಮೊಟ್ಟ ಮೊದಲ ಬಾರಿಗೆ ಎಲ್ಲಾ ವರ್ಗದ ಕುಟುಂಬಕ್ಕೆ ಈ ಬೈಕನ್ನು ಬಿಡುಗಡೆಗೊಳಿಸಿದ್ದು, ಎಲ್ಲಾ ವರ್ಗದ ಜನರ ಮೆಚ್ಚುಗೆ ಪಾತ್ರವಾಗಿದೆ.
FZ ವರ್ಷನ್ -3ಯ ಸುಧಾರಿತ ಬೈಕಾಗಿರುವ FZ ರೇವ್ ಬ್ಲ್ಯಾಕ್ ಆರೆಂಜ್ ವ್ಹೀಲ್ ಹಾಗೂ ಟೈಟನ್ ಗ್ರೇ ಬಣ್ಣಗಳಲ್ಲಿ ಲಭ್ಯ ಎಂದು ಉಡುಪಿ ಮೋಟರ್ಸ್ ಪ್ರಕಟಣೆ ತಿಳಿಸಿದೆ.