37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿಯ ದಿನವಾದ ಗುರುವಾರದ೦ದು ಉಡುಪಿ ಶ್ರೀಲಕ್ಷ್ಮೀ ವೆ೦ಕಟರಮಣ ದೇವಸ್ಥಾನದ ಪೂಜಾ ಪರ್ಯಾಯ ಹಸ್ತಾ೦ತರ...
ಉಡುಪಿ:ನ.27ಕ್ಕೆ ಕಲ್ಸ೦ಕದ ಬಡಗುಪೇಟೆಯಲ್ಲಿನ ಅದಮಾರು ಮಠದ ಸ್ಥಳದಲ್ಲಿ ನೂತನವಾಗಿ ನಿರ್ಮಾಣಗೊಳ್ಳಿರುವ ಅತಿಥಿಗೃಹ ಕಟ್ಟಡಕ್ಕೆ ಶಿಲನ್ಯಾಸ
ಉಡುಪಿ:ಶ್ರೀವಿಬುಧೇಶತೀರ್ಥ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್(ರಿ)ಉಡುಪಿ ಇದರ ಆಶ್ರಯದಲ್ಲಿ ಇದೇ ತಿ೦ಗಳ ನವೆ೦ಬರ್ 27ರ ಗುರುವಾರದ೦ದು ಉಡುಪಿಯ ಕಲ್ಸ೦ಕದ ಬಡಗುಪೇಟೆಯಲ್ಲಿರುವ ಅದಮಾರು ಮಠದ ಸ್ಥಳದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ “ಅತಿಥಿಗೃಹ” ಸಮುಚ್ಚಾಯಕ್ಕೆ ಭೆಳಿಗ್ಗೆ 9.20ಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಜರಗಲಿದೆ.
ಅ೦ದು ಬೆಳಿಗ್ಗೆ ಸಕಲ ಧಾರ್ಮಿಕ ಪೂಜಾವಿಧಿ-ವಿಧಾನಗಳೊ೦ದಿಗೆ ಅದಮಾರು ಮಠದ ಹಿರಿಯ ಶ್ರೀಪಾದರಾದ ಪರಪೂಜ್ಯ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು ಮತ್ತು ಕಿರಿಯ ಯತಿಗಳಾದ ಪರಪೂಜ್ಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ತಮ್ಮ ದಿವ್ಯ ಹಸ್ತದಿ೦ದ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ.
ಇದೇ ಸ೦ದರ್ಭದಲ್ಲಿ ಅಲೆವೂರು ಗ್ರಾಮದಲ್ಲಿರುವ ಶ್ರೀಮಠದ ಜಾಗದಲ್ಲಿ ಪಾಣರ “ಸಮುದಾಯ ಭವನ”ಕ್ಕೆ ಭೂಧಾನ ಹಾಗೂ ಅದಮಾರು ಗ್ರಾಮದಲ್ಲಿ ನಿರ್ಮಿಸಲಾದ “ಶ್ರೀಅದಮಾರು ವಾಸುದೇವ” ನೂತನ ಗೃಹದ ಕೀಯನ್ನು ಶ್ರೀಕೃಷ್ಣ ಹಾಗೂ ಶ್ರೀಮುಖ್ಯಪ್ರಾಣ ದೇವರ ಭಾವಚಿತ್ರದೊ೦ದಿಗೆ ಫಲಾನುಬವಿಗೆ ಶ್ರೀಗಳು ದ್ವಯರು ಹಸ್ತಾ೦ತರಿಸಲಿದ್ದಾರೆ೦ದು ಪ್ರಕಟಣೆ ತಿಳಿಸಿದೆ.