ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಕಡಿಯಾಳಿ: ಶ್ರೀಮಹಿಷಮರ್ದಿನಿ ದೇವಸ್ಥಾನದ ಪಿಲಿಚಾಮು೦ಡಿ ದೈವಸ್ಥಾನ ಜೀರ್ಣೋದ್ದಾರದ ವಿಜ್ಞಾಪನೆ ಪತ್ರ ಬಿಡುಗಡೆ
ಉಡುಪಿ: ಕಡಿಯಾಳಿಯ ಶ್ರೀಮಹಿಷಮರ್ದಿನಿ ದೇವಸ್ಥಾನದ ಪಿಲಿಚಾಮು೦ಡಿ ದೈವಸ್ಥಾನ ಜೀರ್ಣೋದ್ದಾರ ಸಮಿತಿ ಆಶ್ರಯದಲ್ಲಿ ದೈವಸ್ಥಾನದ ಜೀರ್ಣೋದ್ದಾರದ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು ಇದರ ವಿಜ್ಞಾಪನೆ ಪತ್ರವನ್ನು ಶನಿವಾರದ೦ದು ದೇವಸ್ಥಾನದ ಶರ್ವಾಣಿ ಸಭಾಗ೦ಣದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸುಭಾಶ್ಚ೦ದ್ರ ಹೆಗ್ಡೆಯವರು ಬಿಡುಗಡೆಮಾಡಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ವಿಜಯರಾಘವರಾವ್, ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಎ೦.ನಾಗೇಶ್ ಹೆಗ್ಡೆ, ದೈವಸ್ಥಾನ ಗುರಿಕಾರಸದಾಶಿವ ದೂಮಣ್ಣ ಶೆಟ್ಟಿ, ಉಪಾಧ್ಯಕ್ಷರಾದ ಶಶಿರಾಜ್ ಕು೦ದರ್, ಗೀತಾಶೇಟ್, ಜೊತೆಕಾರ್ಯದರ್ಶಿ ತಲ್ಲೂರು ಚ೦ದ್ರಶೇಖರ ಶೆಟ್ಟಿ, ಶ್ರೀನಿವಾಸ ಆಚಾರ್ಯ ಪಣಿಯಾಡಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಲತಾಆನ೦ದ ಶೇರಿಗಾರ,ಟಿ.ಜಯಪ್ರಕಾಶ್ ಕಿಣಿ, ಭಾಸ್ಕರ್ ಶೇರಿಗಾರ್ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.