......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ವತಿಯಿ೦ದ "ಯುಗಾದಿ" ಹಬ್ಬದ ಹಾರ್ದಿಕ ಶುಭಾಶಯಗಳು......Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!
ಕನಕನ ಕಿ೦ಡಿಯ ಬಳಿಯ ಭಜನೆ ನಡೆಯುತ್ತಿರುವ ವೇದಿಕೆಗೆ ಪರಿಹಾರವಿಲ್ಲವೇ?
ಉಡುಪಿ:ಪಲಿಮಾರು ಮಠದ ಪರ್ಯಾಯದ ಸ೦ದರ್ಭದಲ್ಲಿ ಕನಕನ ಕಿ೦ಡಿಯ ಬಳಿಯಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮವು ಅವರ ಪರ್ಯಾಯದ ಎರಡು ವರ್ಷಗಳ ಕಾಲ ಭಜನಾ ಸ೦ಕೀರ್ತನೆಯು ನಡೆದಿತ್ತು.ಅದರ ಬಳಿಕದ ಪರ್ಯಾಯದ ಬಳಿಕ ಈ ಭಜನಾ ಸ೦ಕೀರ್ತನೆಯು ಬೆಳಿಗ್ಗೆಯಿ೦ದ ಸ೦ಜೆಯವರೆಗೆ ಸೀಮಿತವಾಯಿತು.ಇದರ ಎಲ್ಲಾ ಅಭಿವೃದ್ಧಿಮಾಡಲಾಗುತ್ತಿದೆಯಾದರೂ ಈ ಭಜನೆ ನಡೆಯುವ ಸ್ಥಳದಲ್ಲಿ ನಿರ್ಮಿಸಲಾದ ವೇದಿಕೆಯು ಮಳೆಯಿ೦ದ ಸೊರುತ್ತಿದೆ.
ಇದಕ್ಕೆ ನೀಲಿಬಣ್ಣದ ಟರ್ಪಲು ಹೊದಿಸಲಾಗಿದೆ. ಈ ಬಗ್ಗೆ ಹಲವರು ಮ೦ದಿ ಭಕ್ತರು ತಮ್ಮ ಅಳನ್ನು ತೋಡಿಕೊಳ್ಳುತ್ತಿದ್ದಾರೆ.ಇಷ್ಟೆಲ್ಲಾ ಅದರೂ ಈ ವೇದಿಕೆಯ ಸಮಸ್ಯೆ ಪರಿಹಾರ ಮಾಡಲು ಕಷ್ಟವೇ ಎ೦ದು ಬೀದಿಯಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಸ೦ಬ೦ಧ ಪಟ್ಟವರು ಈ ಬಗ್ಗೆ ಗಮನ ಹರಿಸಿ ತಕ್ಷಣವೇ ಸರಿಪಡಿಸುವರೇ?