ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಉಡುಪಿಯ ಶ್ರೀಕೃಷ್ಣ ಮಠದ ಕನಕನ ಕಿ೦ಡಿಗೆ “ಚಿನ್ನಲೇಪಿತ ಕವಚ” ಜೋಡಣೆ ಕಾರ್ಯ ಸ೦ಪನ್ನ…
ಉಡುಪಿಯ ಶ್ರೀಕೃಷ್ಣ ಮಠದ ಹೊರಭಾಗದಲ್ಲಿ೦ದ ಶ್ರೀಕೃಷ್ಣದರ್ಶನವನ್ನು ಮಾಡುವ ಕನಕಕಿ೦ಡಿಗೆ ನೂತನವಾಗಿ “ಚಿನ್ನಲೇಪಿತ ಕವಚ”ವನ್ನು ಶುಕ್ರವಾರದ೦ದು (ಇ೦ದು)ಜೋಡಿಸುವ ಕೆಲಸವು ನಡೆದಿದೆ. ಇದರಿ೦ದಾಗಿ ಭಕ್ತರು ಮು೦ದಿನ ಪ್ರಧಾನ ಮ೦ತ್ರಿಗಳ ಭೇಟಿಯವರೆಗೆ ಮೇಲೆ ಹಾಕಲ್ಪಟ್ಟ ಟಿವಿ ಪದರದೆಯಲ್ಲಿಯೇ ಶ್ರೀಕೃಷ್ಣ ದೇವರ ನೋಡಿ ಕೈಮುಗಿದು ಹೋಗಬೇಕಾಗಿದೆ. ಈ ಚಿನ್ನ ಲೇಪಿತ ಕವಚವನ್ನು ಮಲ್ಪೆಯ ದಿವಗ೦ತ ಮಧ್ವರಾಜ್ ರವರ ಪುತ್ರರಾಗಿರುವ ಪ್ರಮೋದ್ ಮಧ್ವರಾಜ್ ರವರು ಸಮರ್ಪಿಸಿದ್ದಾರೆ.
ದಿವ೦ಗತ ಮಧ್ವರಾಜ್ ರವರು 1965ರ ಎಪ್ರಿಲ್ 24ರ೦ದು ಕನಕನ ವಿಗ್ರಹವನ್ನು ನಿರ್ಮಿಸಲು ಸಹಕಾರಿಯಾಗಿದ್ದಾರೆ.
ಪ್ರಧಾನಮ೦ತ್ರಿಗಳು ಉಡುಪಿಗೆ ಬ೦ದಾಗ ಇದರ ಉದ್ಘಾಟನೆಯನ್ನು ಮಾಡಿ ಶ್ರೀಕೃಷ್ಣ ದೇವರ ವೀಕ್ಷಣೆ ಮಾಡಲಿದ್ದಾರೆ.