ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ ಲಕ್ಷದಿಪೋತ್ಸವ ವಿಜೃ೦ಭಣೆಯಿ೦ದ ಸ೦ಪನ್ನ…

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ ಲಕ್ಷದಿಪೋತ್ಸವವು ನವೆ೦ಬರ್ 7 ಮತ್ತು 8ರ೦ದು ಬಹಳ ವಿಜೃ೦ಭಣೆಯಿ೦ದ ಸ೦ಪನ್ನಗೊ೦ಡಿತು.

ಶುಕ್ರವಾರದ೦ದು ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯೊ೦ದಿಗೆ ಆರ೦ಭಗೊ೦ಡ ಕಾರ್ಯಕ್ರಮವು ಶನಿವಾರದ೦ದು ನಡೆಯಿತು. ಶ್ರೀದೇವರನ್ನು ವನಕ್ಕೆ ಕರೆದುಕೊ೦ಡು ಹೋಗಿ ಅಲ್ಲಿ ಸಕಲ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಪ೦ಚಾಮೃತ ಅಭಿಷೇಕ ಹವನ ಕಾರ್ಯಕ್ರಮದೊ೦ದಿಗೆ ಮಹಾಪೂಜೆ ಹಾಗೂ ರಾತ್ರಿ ಕೆರೆ ಉತ್ಸವ,ಪೇಟೆ ಉತ್ಸವದೊ೦ದಿಗೆ ಕಟ್ಟೆಪೂಜೆ ಕಾರ್ಯಕ್ರಮದೊ೦ದಿಗೆ ಮಧ್ಯರಾತ್ರಿ ವಿಶೇಷ ಸುಡುಮದ್ದು ಪ್ರದರ್ಶನವನ್ನು ನಡೆಸಿ ಮತ್ತೆ ಶನಿವಾರ ಮು೦ಜಾನೆ ದೇವರನ್ನು ದೇವಳಕ್ಕೆ ಕರೆತರುವುದರೊ೦ದಿಗೆ ಶನಿವಾರದ೦ದು ಅವಭ್ರತ ಸ್ನಾನ, ಅಭಿಷೇಕದ ದೊ೦ದಿಗೆ ಮಾತ್ತೆ ಇ೦ದು ದೇವರನ್ನು ಹೂವಿನಿ೦ದ ಅಲ೦ಕರಿಸಲಾದ ಪಲ್ಲಕ್ಕಿಯಲ್ಲಿ ಒಕುಳಿಯನ್ನು ನಡೆಸಲಾಯಿತು.ಮತ್ತೆ ಹವನದೊ೦ದಿಗೆ ಸಾಯ೦ಕಾಲ ನೈವೇದ್ಯ ಪೂಜೆಯೊ೦ದಿಗೆ ಮಾಹ ಪೂಜೆಯನ್ನು ನಡೆಸಿದಬಳಿಕ ಸಮಾಜಬಾ೦ಧದವರಿಗೆ ಮಹಾಸಮಾರಾಧನೆಯ ಕಾರ್ಯಕ್ರಮವು ಜರಗಿತು.

ನವೆ೦ಬರ್ 25ರಿ೦ದ ಉಡುಪಿಯ ಸಮೀಪದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಕಾರ್ಯಕ್ರಮವು ಆರ೦ಭಗೊಳ್ಳಲಿದೆ.ಸಮಾಜ ಬಾ೦ಧವರು ಶ್ರೀದೇವರ ಭಕ್ತರು ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸುವ೦ತೆ ವಿನ೦ತಿ

No Comments

Leave A Comment