ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯ ಮುಖ್ಯ ಸ್ಥಳವಾದ ಜಿಯೊಂಗ್ಜುವಿನ ದಕ್ಷಿಣಕ್ಕೆ ಸುಮಾರು 76 ಕಿ.ಮೀ ದೂರದಲ್ಲಿರುವ ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಭಾರತೀಯ ಕಾಲಮಾನ ಇಂದು ಬೆಳಗ್ಗೆ 11 ಗಂಟೆಗೆ ಸಭೆ ಪ್ರಾರಂಭವಾಗಲಿದೆ.
ಈ ವಾರದ ಆರಂಭದಲ್ಲಿ ಕೌಲಾಲಂಪುರದಲ್ಲಿ ಎರಡೂ ದೇಶಗಳ ಅಧಿಕಾರಿಗಳು ತಮ್ಮ ನಾಯಕರಿಗೆ ಮಾತುಕತೆ ನಿಗದಿಪಡಿಸಲು ನಿಶ್ಚಯಿಸಿದ್ದರು. ನಂತರ, ಚೀನಾದ ಉನ್ನತ ವ್ಯಾಪಾರ ಸಮಾಲೋಚಕ ಲಿ ಚೆಂಗ್‌ಗ್ಯಾಂಗ್ ಅವರು “ಪ್ರಾಥಮಿಕ ಒಮ್ಮತ”ವನ್ನು ತಲುಪಿದ್ದೇವೆ ಎಂದು ಹೇಳಿದರು, ಈ ಹೇಳಿಕೆಯನ್ನು US ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ದೃಢಪಡಿಸಿದರು,
ಚೀನಾವನ್ನು ವಿಶ್ವಾಸಾರ್ಹ ಪಾಲುದಾರನನ್ನಾಗಿ ಇರಿಸಿಕೊಳ್ಳಲು ಮತ್ತು ಅಮೆರಿಕದ ಆಡಳಿತದ ಸುಂಕ ನೀತಿಯಿಂದ ನಿರಾಶೆಗೊಂಡ ದೇಶಗಳೊಂದಿಗೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಕ್ಸಿ ಜಿನ್ ಪಿಂಗ್ ಒಂದು ಅವಕಾಶವನ್ನು ನೋಡುತ್ತಾರೆ ಎಂದು ಗುಪ್ತಚರ ಸಲಹಾ ಸಂಸ್ಥೆಯಾದ ಟಿಡಿ ಇಂಟರ್ನ್ಯಾಷನಲ್‌ನ ಸಿಇಒ ಆಗಿರುವ ಮಾಜಿ ವಿದೇಶಾಂಗ ಇಲಾಖೆಯ ಅಧಿಕಾರಿ ಜೇ ಟ್ರೂಸ್‌ಡೇಲ್ ಹೇಳಿದ್ದಾರೆ.