ಉಡುಪಿ ನಗರಸಭೆಯ ಬನ್ನಂಜೆ-ಶಿರಿಬೀಡು ವಾರ್ಡಿನ ಒಳಚರಂಡಿಯ ದುರ್ವಾಸನೆಗೆ ಮುಕ್ತಿ ಯಾವಾಗ?-ಗುದ್ದಲಿ ಪೂಜೆ ನಡೆದರೂ ಮಾರುಕಟ್ಟೆ ಕಾಮಗಾರಿ ಆರ೦ಭಿಸಿಲ್ಲವೇಕೆ ಸಾಮಾನ್ಯ ಸಭೆಯಲ್ಲಿ ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನೆ
ಉಡುಪಿ:ಮ೦ಗಳವಾರದ೦ದು ನಡೆದ ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರಸಭೆಯ ನಾಮನಿರ್ದೇಶಕ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನಿಸಿದ್ದಾರೆ.
ಉಡುಪಿ ನಗರಸಭೆಯಲ್ಲಿ ನಡೆದಂತಹ ಸಾಮಾನ್ಯ ಸಭೆಯಲ್ಲಿ ನಗರಸಭಾ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ಮಾತನಾಡಿ ನಿರಂತರವಾಗಿ ಬನ್ನಂಜೆ ಹಾಗೂ ಶಿರಿಬೀಡು ವಾರ್ಡಿನಲ್ಲಿ ರಾಜ ಕಾಲುವೆಯಲ್ಲಿ ನಿರಂತರವಾಗಿ ಒಳ ಚರಂಡಿಯ ನೀರು ಹರಿಯುತ್ತಿದ್ದು ಇದಕ್ಕೆ ಪರಿಹಾರವೇ ಇಲ್ಲದಂತಾಗಿದೆ ಸ್ಥಳೀಯ ತೋಡಿನ ಬದಿಯ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಕೂಡಲೇ ಇದನ್ನು ಸರಿಪಡಿಸಿ ಜನರ ಸಮಸ್ಯೆಯನ್ನು ಪರಿಹರಿಸಿ ಎಂದು ಸಭೆಯಲ್ಲಿ ಆಗ್ರಹಿಸಿದರು.
ಅದೇ ರೀತಿ ಪರ್ಕಳದ ನೂತನ ಮಾರುಕಟ್ಟೆಗೆ ಗುದ್ದಲಿ ಪೂಜೆ ನಡೆದು ಮೂರು ತಿಂಗಳಾದರೂ ಇನ್ನು ಕಾಮಗಾರಿ ಪ್ರಾರಂಭವಾಗಿಲ್ಲ ಹಳೆಯ ಮಾರುಕಟ್ಟೆಯನ್ನು ಕೆಡವಲಾಗಿದೆ ಅದನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿ ಇಲ್ಲಿ ಇಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಜನರು ವಾಹನಗಳನ್ನು ರಸ್ತೆಯಲ್ಲಿ ಇಟ್ಟು ಹೋಗಬೇಕಾದ ಪರಿಸ್ಥಿತಿ ಇದೆ ಇದರಿಂದ ಸ್ಥಳೀಯ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಸಭೆಯಲ್ಲಿ ಹೇಳಿದರು ಕೂಡಲೇ ಕಟ್ಟಡದ ಕಾಮಗಾರಿ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.