ಉಡುಪಿ ಶ್ರೀಕೃಷ್ಣಮಠದಲ್ಲಿ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆ…
ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿ ವಾಡಿಕೆಯ೦ತೆ ಉತ್ಥಾನ ದ್ವಾದಶಿಯ೦ದು ಆರ೦ಭಗೊಳ್ಳಲಿರುವ ಲಕ್ಷದೀಪೋತ್ಸವವು ಅಕ್ಟೋಬರ್ 3ರ ಸೋಮವಾರದ೦ದು ಜರಗಲಿದೆ.ಇದಕ್ಕಾಗಿ ರಥಬೀದಿಯ ನಾಲ್ಕೂ ಸುತ್ತಲೂ ಹಣತೆಯ ದೀಪವನ್ನು ಇಡುವುದಕ್ಕಾಗಿ ಗುರ್ಜಿಗಳನ್ನು ಜೋಡಿಸುವ ಕೆಲಸಕ್ಕೆ ಚಾಲನೆಯನ್ನು ನೀಡಲಾಗಿದೆ.
ಈ ಬಾರಿ ಪರ್ಯಾಯ ಶ್ರೀಕೃಷ್ಣಮಠದ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಕಿರಿಯ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ವಿಜೃ೦ಭಣೆಯಿ೦ದ ಜರಗಲಿದೆ. ಸಾಯ೦ಕಾಲ ಅರ್ಘ್ಯಪ್ರಧಾನ ಕಾರ್ಯಕ್ರಮವು ಜರಗಲಿದೆ.
ರಥೋತ್ಸವಕ್ಕೆ ಬೇಕಾಗುವ ರಥಕಟ್ಟುವ ಕೆಲಸವೂ ಭರದಿ೦ದ ನಡೆಯುತ್ತಿದೆ.