ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಉಡುಪಿ ಶ್ರೀಕೃಷ್ಣಮಠದಲ್ಲಿ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆ…

ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿ ವಾಡಿಕೆಯ೦ತೆ ಉತ್ಥಾನ ದ್ವಾದಶಿಯ೦ದು ಆರ೦ಭಗೊಳ್ಳಲಿರುವ ಲಕ್ಷದೀಪೋತ್ಸವವು ಅಕ್ಟೋಬರ್ 3ರ ಸೋಮವಾರದ೦ದು ಜರಗಲಿದೆ.ಇದಕ್ಕಾಗಿ ರಥಬೀದಿಯ ನಾಲ್ಕೂ ಸುತ್ತಲೂ ಹಣತೆಯ ದೀಪವನ್ನು ಇಡುವುದಕ್ಕಾಗಿ ಗುರ್ಜಿಗಳನ್ನು ಜೋಡಿಸುವ ಕೆಲಸಕ್ಕೆ ಚಾಲನೆಯನ್ನು ನೀಡಲಾಗಿದೆ.

ಈ ಬಾರಿ ಪರ್ಯಾಯ ಶ್ರೀಕೃಷ್ಣಮಠದ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಕಿರಿಯ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ವಿಜೃ೦ಭಣೆಯಿ೦ದ ಜರಗಲಿದೆ.
ಸಾಯ೦ಕಾಲ ಅರ್ಘ್ಯಪ್ರಧಾನ ಕಾರ್ಯಕ್ರಮವು ಜರಗಲಿದೆ.

ರಥೋತ್ಸವಕ್ಕೆ ಬೇಕಾಗುವ ರಥಕಟ್ಟುವ ಕೆಲಸವೂ ಭರದಿ೦ದ ನಡೆಯುತ್ತಿದೆ.

No Comments

Leave A Comment