ಉಡುಪಿ: ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ಕಾರ್ತಿಕಮಾಸದಲ್ಲಿ ನಡೆಯಲಿರುವ ಲಕ್ಷದೀಪೋತ್ಸವವು ನವೆ೦ಬರ್ 7ರ ಶುಕ್ರವಾರದ೦ದು ಜರಗಲಿದೆ. ವನಪೂಜೆ,ಮಧ್ಯಾಹ್ನ ಪೂಜೆ,ವನಭೋಜನ,ರಾತ್ರಿಪೂಜೆ, ಕೆರೆಉತ್ಸವದೊ೦ದಿಗೆ ಪೇಟೆ ಉತ್ಸವದೊ೦ದಿಗೆ ಕಟ್ಟೆ ಪೂಜೆ,ರಾತ್ರಿ ಬೀಡಿನಗುಡ್ಡೆಯಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ.

ಮಹೇಶ್ ವಾಳ್ವೇಕರ್ ಸೇರಿ ಮೂವರು ರಾಜ್ಯ ಮಾಹಿತಿ ಆಯುಕ್ತರಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ರಾಜ್ಯ ಮಾಹಿತಿ ಆಯುಕ್ತರಾಗಿ ನೇಮಕಗೊಂಡಿರುವ ಡಾ.ರಿಚರ್ಡ್ ವಿನ್ಸೆಂಟ್‌ ಡಿಸೋಜ, ಬಿ.ವೆಂಕಟ್ ಸಿಂಗ್ ಹಾಗೂ ಡಾ.ಮಹೇಶ್ ವಾಳ್ವೇಕರ್ ಅವರು ಗುರುವಾರ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ರಾಜಭವನದ ಬ್ಯಾಂಕ್ವೆಟ್ ‌ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನವಾಗಿ ನೇಮಕವಾಗಿರುವ ರಾಜ್ಯ ಮಾಹಿತಿ ಆಯುಕ್ತರುಗಳಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು.

ಬೆಂಗಳೂರು ಪೀಠಕ್ಕೆ ನೂತನವಾಗಿ ನೇಮಕವಾಗಿರುವ ರಾಜ್ಯ ಮಾಹಿತಿ ಅಯುಕ್ತರುಗಳಾದ ಡಾ.ರಿಚರ್ಡ್ ವಿನ್ಸೆಂಟ್‌ ಡಿಸೋಜ ಹಾಗೂ ಡಾ. ಮಹೇಶ್ ವಾಳ್ವೇಕರ್ ಅವರು ದೇವರ ಹೆಸರಿನಲ್ಲಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರು.

ಇನ್ನೂ ಕಲಬುರಗಿ ಪೀಠಕ್ಕೆ ನೇಮಕವಾಗಿರುವ ಬಿ. ವೆಂಕಟ್ ಸಿಂಗ್ ಅವರು ದೇವರು ಮತ್ತು ಸಂವಿಧಾನದ ಹೆಸರಿನಲ್ಲಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರು.

No Comments

Leave A Comment