ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಆರ್ ಬಿ ಐಯ ಹೊಸ ನೀತಿ-ಬ್ಯಾ೦ಕ್ ಗ್ರಾಹಕರಿಗೆ ಕಗ್ಗ೦ಟು-ಕೋಟ್ಯಾ೦ತರ ರೂಪಾಯಿ ವ್ಯವಹಾರಕ್ಕೆ ಬ್ರೇಕ್ -ಹಣಕ್ಕಾಗಿ ಪರದಾಡುತ್ತಿರುವ ಗ್ರಾಹಕರು
ದೇಶದ ಆರ್ ಬಿ ಐಯು ಇತ್ತೀಚಿನ ದಿನಗಳ ಹಿ೦ದೆ ಹಣಕಾಸುವರ್ಗಾವಣೆಯಲ್ಲಿ ವ್ಯವಸ್ಥೆಯಲ್ಲಿ ಹೊಸ ನೀತಿಯೊ೦ದನ್ನು ಜಾರಿಗೆ ತ೦ದಿದ್ದು ಇದರಿ೦ದಾಗಿ ಬ್ಯಾ೦ಕ್ ವ್ಯವಹಾರದ ಮೇಲೆ ದೊಡ್ದ ಪರಿಣಾಮವನ್ನು೦ಟುಮಾಡಿದೆ. ಈ ಹೊಸ ನೀತಿ ಎಲ್ಲಾ ಬ್ಯಾ೦ಕ್ ಗ್ರಾಹಕರಿಗೆ ದೊಡ್ಡ ತಲೆನೋವನ್ನು೦ಟು ಮಾಡಿದೆ, ಮಾತ್ರವಲ್ಲದೇ ಬ್ಯಾ೦ಕ್ ಖಾತೆಯ ಗ್ರಾಹಕರು ತಮ್ಮ ತಮ್ಮ ಹಣಕಾಸಿನ ವ್ಯವಹಾರದಲ್ಲಿ ಹಣಕ್ಕಾಗಿ ಪರದಾಡುವ೦ತೆ ಮಾಡಿದೆ. ಸಾವಿರಾರು ಮ೦ದಿ ಗ್ರಾಹಕರಿಗೆ ಈ ಹೊಸ ನೀತಿಯಿ೦ದಾಗಿ ಹೊಸ ದೊಡ್ಡ ತಲೆನೋವನ್ನು೦ಟು ಮಾಡಿದೆ.
ಬಾಡಿಗೆ ಮನೆ ಪಡೆದುಕೊ೦ಡವರಿಗೆ,ಕ೦ಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ,ಅ೦ಗಡಿ ಮಾಲಿಕರಿಗೆ,ಸೇರಿದ೦ತೆ ಚೆಕ್ ಮೂಲಕ ನಡೆಯುತ್ತಿರುವ ಎಲ್ಲಾ ವ್ಯವಹಾರಗಳ ಮೇಲೆ ಭಾರಿ ಹೊಡೆತ ಬಿದ್ದ೦ತಾಗಿದೆ.ಈ ಹಿ೦ದೆ ನೋಟು ಬದಲಾವಣೆಯ೦ತೆ ಇದೀಗ ಏನೋ ಸಾಧನೆಯನ್ನು ಮಾಡಲು ಕೈಹಾಕಿದ ಆರ್ ಬಿ ಐ ಹೊಸನೀತಿ ಆರ೦ಭದಲ್ಲೇ ಎಡವಟ್ಟಿಗೆ ಕಾರಣವಾಗಿದೆ.ಇದರಿ೦ದಾಗಿ ಎಲ್ಲಾ ವ್ಯವಹಾರಗಳ ಮೇಲೆ ಭಾರಿ ಹೊಡೆತಬಿದ್ದಾ೦ತಾಗಿದೆ.
ಅದರೆ ನಮ್ಮಿ೦ದ ಆಯ್ಕೆಯಾಗಿ ಸರಕಾರದಲ್ಲಿ ಮ೦ತ್ರಿ ಪದವಿಸ್ಥಾನವನ್ನು ಪಡೆದುಕೊ೦ಡ ಜನಪ್ರತಿನಿಧಿಗಳು ಮಾತ್ರ ಚಿರನಿದ್ರೆಗೆ ಜಾರಿರುವ೦ತಾಗಿದೆ.
ದೀಪಾವಳಿಯ ಈ ಸಮಯದಲ್ಲಿ ಈ ಹೊಸನೀತಿಯನ್ನು ಜಾರಿಗೆ ತ೦ದಿರುವ ಈ ವ್ಯವಸ್ಥೆಯ ಬಗ್ಗೆ ಬ್ಯಾ೦ಕ್ ಗ್ರಾಹಕರು ಆರ್ ಬಿ ಐ ಹಾಗೂ ಮ೦ತ್ರಿಗಳಿಗೆ ಹಿಡಿಶಾಪವನ್ನು ಹಾಕುತ್ತಿದ್ದಾರೆ. ಈ ಹೊಸನೀತಿಯು ದೇಶದ ಅರ್ಥಿಕ ಪರಿಸ್ಥಿತಿಯು ದಿವಾಳಿಯತ್ತಸಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದ ಹಾಗಿದೆ ಎನ್ನುತ್ತಿದ್ದಾರೆ ಬ್ಯಾ೦ಕ್ ಗ್ರಾಹಕರು.
ಈ ವ್ಯವಸ್ಥೆಯು ಮು೦ದೊ೦ದು ದಿನ ಖಾಸಗಿ ಬ್ಯಾ೦ಕ್ ಮತ್ತು ಖಾಸಗಿ ಹಣಕಾಸು ಸ೦ಸ್ಥೆಗಳ ಮೇಲೆ ಪರಿಣಾಮಬಿದ್ದರೂ ಆಶ್ಚರ್ಯಪಡುವ೦ತಿಲ್ಲ.