ಉಡುಪಿ: ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ಕಾರ್ತಿಕಮಾಸದಲ್ಲಿ ನಡೆಯಲಿರುವ ಲಕ್ಷದೀಪೋತ್ಸವವು ನವೆ೦ಬರ್ 7ರ ಶುಕ್ರವಾರದ೦ದು ಜರಗಲಿದೆ. ವನಪೂಜೆ,ಮಧ್ಯಾಹ್ನ ಪೂಜೆ,ವನಭೋಜನ,ರಾತ್ರಿಪೂಜೆ, ಕೆರೆಉತ್ಸವದೊ೦ದಿಗೆ ಪೇಟೆ ಉತ್ಸವದೊ೦ದಿಗೆ ಕಟ್ಟೆ ಪೂಜೆ,ರಾತ್ರಿ ಬೀಡಿನಗುಡ್ಡೆಯಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ.

ಧಾರವಾಡ: ಮರಕ್ಕೆ ಡಿಕ್ಕಿ ಹೊಡೆದ ಕ್ರೂಸರ್; ಗದಗ ಮೂಲದ ತಾಯಿ- ಮಗ ಸ್ಥಳದಲ್ಲೇ ಸಾವು

ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 8 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ತಾಲೂಕಿನ ತೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಗದಗದ ಹುಡ್ಕೋ ಕಾಲನಿಯ ನಿವಾಸಿಗಳಾದ ಸುರೇಶ ಬಸವಣೆಪ್ಪ ತುಪ್ಪದ (52), ಮಹಾಂತಮ್ಮ ತುಪ್ಪದ (65) ಮೃತ ದುರ್ದೈವಿಗಳು.

ಗದಗ ಮೂಲದ ಕುಟುಂಬವು ಗದಗದಿಂದ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿದ್ದರು. ಕೊಲ್ಲಾಪುರದಿಂದ ವಾಪಸ್ಸಾಗುತ್ತಿದ್ದಾಗ ಮುಲ್ಲಾ ಧಾಬಾ ಬಳಿ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕ್ರೂಸರ್‌ನಲ್ಲಿದ್ದ ಮಕ್ಕಳು, ಮಹಿಳೆಯರು ಸೇರಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಧಾರವಾಡ ಜಿಲ್ಲಾ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಧಾರವಾಡ ಗರಗ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

No Comments

Leave A Comment