ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಅಂಬಲಪಾಡಿ ಯಕ್ಷಗಾನ ಕಲಾಮಂಡಳಿಯ ಅಧ್ಯಕ್ಷರಾಗಿ ಕೆ.ಅಜಿತ್ ಕುಮಾರ್ ಆಯ್ಕೆ
ಉಡುಪಿ: ಅಂಬಲಪಾಡಿಯ ಶ್ರೀ ಲಕ್ಷ್ಮಿ ಜನಾರ್ಧನ ಯಕ್ಷಗಾನ ಕಲಾಮಂಡಳಿಯ 67ನೇ ವಾರ್ಷಿಕ ಮಹಾಸಭೆ ದಿನಾಂಕ: 7-9 -2025ರಂದು ಕೆ.ಅಜಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಶ್ರೀ ಪ್ರಕಾಶ ಹೆಬ್ಬಾರ ಗತ ಸಭೆಯ ವರದಿ ಮಂಡಿಸಿದರು. ಎ ನಟರಾಜ ಉಪಾಧ್ಯಾಯ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಿಎ ಗಣೇಶ ಹೆಬ್ಬಾರರನ್ನು 2025 2026ನೇ ಸಾಲಿನ ಲೆಕ್ಕಪರಿಶೋಧಕರಾಗಿ ನಿಯುಕ್ತಿಗೊಳಿಸಲಾಯಿತು.
2025 -26 ನೇ ಸಾಲಿಗೆ ಈ ಕೆಳಗಿನ ಆಡಳಿತ ಮಂಡಳಿಯನ್ನು ಆರಿಸಲಾಯಿತು.ಅಧ್ಯಕ್ಷ : ಶ್ರೀ ಕೆ. ಅಜಿತ್ ಕುಮಾರ್ ಉಪಾಧ್ಯಕ್ಷ: ಕೆ ಜೆ ಗಣೇಶ್ ಕಾರ್ಯದರ್ಶಿ :ಪ್ರಕಾಶ ಹೆಬ್ಬಾರ್ ಜತೆ ಕಾರ್ಯದರ್ಶಿ: ನಚಿಕೇತ ಕೋಶಾಧಿಕಾರಿ :ಎ. ನಟರಾಜ ಉಪಾಧ್ಯ ಗೌರವ ಸಲಹೆಗಾರರು:ಎ. ರಾಘವೇಂದ್ರ ಉಪಾಧ್ಯಾಯ. ಕಾರ್ಯಕಾರಿ ಸಮಿತಿ ಸದಸ್ಯರು: ಶ್ರೀ ಮರಳಿ ಕಡೆಕಾರ್, ನಾರಾಯಣ ಎಂ ಹೆಗಡೆ, ಪ್ರವೀಣ ಉಪಾಧ್ಯ, ಕೆ ಜೆ ಕೃಷ್ಣ,ಮಂಜುನಾಥ ತೆಂಕಿಲ್ಲಾಯ, ವಸಂತ ಪಾಲನ್, ಸುನಿಲ್ ಕುಮಾರ್, ಕೆ ಜೆ ಸುಧೀಂದ್ರ,ರಮೇಶ ಸಾಲಿಯಾನ್, ಜಯ. ಕೆ. ವಿಶೇಷ ಆಹ್ವಾನಿತರು: ಎಸ್ ವಿ ಭಟ್, ವಿದ್ಯಾ ಪ್ರಸಾದ್, ಮಾಧವ ಕೆ,ವಿಜಯ ಕುಮಾರ್ ಮುದ್ರಾಡಿ, ಪ್ರಶಾಂತ್ ಕೆ ಎಸ್, ಅರವಿಂದ್ ಆಚಾರ್ಯ, ದೀಪ್ತ ಆಚಾರ್ಯ, ಸತ್ಯಜಿತ್ ಉಪಾಧ್ಯ, ಪ್ರಣೀತ್ ಆಚಾರ್ಯ, ಸವಿನ್ ಆಚಾರ್ಯ.ಕಾರ್ಯದರ್ಶಿ ಪ್ರಕಾಶ ಹೆಬ್ಬಾರ ದನ್ಯವಾದ ನೀಡಿದರು.
ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಮ್ಮ ಮಂಡಳಿಯ ಕೋಶಾಧಿಕಾರಿಯಾದ ಶ್ರೀ ನಟರಾಜ್ ಉಪಾಧ್ಯಾಯರನ್ನು ಮಂಡಳಿಯ ಕಚೇರಿಯಲ್ಲಿ ಅಭಿನಂದಿಸಲಾಯಿತು.