ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳನ್ನು, ಪಕ್ಕದಲ್ಲಿರುವ ಸರ್ವಿಸ್ ರಸ್ತೆಗಳನ್ನು ಸರಿಪಡಿಸಲಾಗದ ನಮ್ಮ ಲೋಕಸಭಾ ಸದಸ್ಯರು ಕೂಡಲೇ ರಾಜೀನಾಮೆ ನೀಡಲಿ- ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ: ಉಡುಪಿ ಹಾಗು ಮಂಗಳೂರು ಜಿಲ್ಲೆಯ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣವಾಗಿ ಹಾಳಾಗಿ ಕಳೆದ ಕೆಲವು ವರ್ಷಗಳಿಂದ ಇದರ ನಿರ್ವಹಣೆ ಇಲ್ಲದಂತಾಗಿದೆ. ಆದರೆ ನಮ್ಮ ಲೋಕಸಭಾ ಸದಸ್ಯರು ಇದರ ಬಗ್ಗೆ ಹೇಳಿಕೆಯನ್ನು ನೀಡಿ ನಾವು ಇದನ್ನು ಕೂಡಲೆ ಸರಿಪಡಿಸುತ್ತಿವೆ ಎಂಬುದನ್ನು ಕೆಲವು ತಿಂಗಳುಗಳ ಹಿಂದೆ ಪತ್ರಿಕಾ ಹೇಳಿಕೆ ನೀಡುತ್ತಾ ಸಮಯ ಕಳೆಯುತ್ತಿದ್ದಾರೆ. ಆದರೆ ನಮ್ಮ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಆಕ್ಸಿಡೆಂಟ್ ಆಗಿ ಹೆಣಗಳು ಉರುಳುತ್ತಾ ಇವೆ .ಈ ಬಗ್ಗೆ ನಮ್ಮ ಜಿಲ್ಲೆಯ ಯಾವುದೇ ಶಾಸಕರಾಗಲಿ. ಅಥವಾ ಎರಡು ಜಿಲ್ಲೆಯ ಲೋಕಸಭಾ ಸದಸ್ಯರು ಕಣ್ಣು ಮುಚ್ಚಿಕೊಂಡು ಕುಳಿತ್ತಿದ್ದಾರೆ. ಇವರಿಗೆ ಹಿಂದುತ್ವ. ಮತ್ತೆ ಧರ್ಮದ ರಾಜಕೀಯ .ಇದನ್ನು ಬಿಟ್ಟರೆ ಇವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ .
ಇಂತಹ ಲೋಕಸಭಾ ಸದಸ್ಯರು ಹಾಗೂ ವಿಧಾನಸಭಾ ಸದಸ್ಯರ ಅಗತ್ಯ ನಮ್ಮ ಜಿಲ್ಲೆಗಳಿಗೆ ಇದೆಯೇ ?ಎಂಬುದರ ಬಗ್ಗೆ ನಮ್ಮ ಕರಾವಳಿ ಜಿಲ್ಲೆಯ ಜನಸಾಮಾನ್ಯರು ಅರಿತುಕೊಳ್ಳಬೇಕಾಗಿದೆ. ಉಡುಪಿಯ ಬನ್ನಂಜೆ ಯಲ್ಲಿ ಹೆದ್ದಾರಿಯನ್ನು ಅಗಲಗೊಳಿಸಿ ಜಯಲಕ್ಷ್ಮಿ ಎಂಬ ಬಟ್ಟೆ ಮಳಿಗೆಗೆ ಉತ್ತೇಜನವನ್ನು ನೀಡಿದಂತಹ ಈ ಬಿಜೆಪಿಯ ನಾಯಕರುಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ.ಜನಸಾಮಾನ್ಯರ ಬಗ್ಗೆ ಏಕೆ ಕಾಳಜಿ ಇಲ್ಲ. ಕೂಡಲೇ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತುಕೊಳ್ಳಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಉಡುಪಿ ನಗರಸಭಾ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.