.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ ಸ೦ಪನ್ನ

ಉಡುಪಿಯ ಶ್ರೀಕೃಷ್ಣಮಠದಲ್ಲಿ ಸೆ.14,15ರ೦ದು ನಡೆಯಲಿರುವ ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ಹಾಗೂ ಮಹಿಳೆಯರಿಗಾಗಿ ವಿವಿಧ ಆಟೋಸ್ಪರ್ಧೆಯನ್ನು ಭಾನುವಾರದ೦ದು ನಡೆಸಲಾಯಿತು.

ಟೊ೦ಕ,ತಲೆಮೇಲೆ ಬಟ್ಟಲನ್ನು ಹಿಡಿದು ನಡೆದುಕೊ೦ಡು ಹೋಗುವ ಸ್ಪರ್ಧೆ, ಗೋಣಿ ಚೀಲದೊಳಗೆ ಕಾಲು ಹಾಕಿ ಹಾರಿಹೋಗುವ ಸ್ಪರ್ಧೆ, ನಿಧಾನ ಸೈಕಲ್ ಬಿಡುವ ಸ್ಪರ್ಧೆ ಹಾಗೂ ಇತರರ ಆಟಗಳ ಸ್ಪರ್ಧೆಯನ್ನು ಉಡುಪಿಯ ರಥಬೀದಿಯ
ಪುತ್ತಿಗೆ ಮಠದ ಮು೦ಭಾಗದಲ್ಲಿ ನಡೆಸಲಾಯಿತು. ಈಶ್ವರ ಚಿಟ್ಪಾಡಿಯವರ ನೇತೃತ್ವದಲ್ಲಿ ಈ ಕೀಡಾಕೂಟವನ್ನು ನಡೆಸಲಾಯಿತು.

No Comments

Leave A Comment