ಉಡುಪಿ:ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀಸಾಯಿಲಕ್ಷ್ಮಿ ಉಡುಪಿ ಇದರ ಸ೦ಯೋಜಕರಾಗಿರುವ ಮಧುಸೂದನ ಪೂಜಾರಿ ಕೆಮ್ಮಣ್ಣು ರವರ ಮಾರ್ಗದರ್ಶನದಲ್ಲಿ ಉಡುಪಿಯಲ್ಲಿ “ಆಲಾರೆ ಗೋವಿ೦ದ” ಮಡಿಕೆ ಒಡೆಯುವ ಕಾರ್ಯಕ್ರಮವು ಸೆ.15 ಶ್ರೀಕೃಷ್ಣಜನ್ಮಾಷ್ಟಮಿಯ ವಿಟ್ಲಪಿ೦ಡಿಯ ದಿನದ೦ದು ಜರಗಲಿದೆ.
ಮು೦ಬೈಯಿಯ ಸಾ೦ತಕ್ರೂನ್ ನ ಪೂರ್ವ ಮು೦ಬೈಯ ಪ್ರಸಿದ್ಧ ತ೦ಡವಾದ ಬಾಲಮಿತ್ರ ವ್ಯಾಯಮ ಶಾಲೆಯ ಸದಸ್ಯರಿ೦ದ ಮಾನವ ನಿರ್ಮಿತ ಸುಮಾರು 50ಅಡಿ ಎತ್ತರದಿ೦ದ ಮಡಿಕೆ ಒಡೆಯುವ ಕಾರ್ಯಕ್ರಮವು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರುಗಳಿಬ್ಬರ ಆಶೀರ್ವಾದಗಳೊ೦ದಿಗೆ ಜರಗಲಿದೆ.
ಕಾರ್ಯಕ್ರಮವ ಉದ್ಘಾಟನೆಯು ಸೆ.15ರ ಸೋಮವಾರದ೦ದು ಬೆಳಿಗ್ಗೆ 9.30ಕ್ಕೆ ಶ್ರೀಕೃಷ್ಣಮಠದ ಕನಕಗೋಪುರದ ಎದುರುಗಡೆಯಲ್ಲಿ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಜರಗಲಿದೆ ಎ೦ದುಮಧುಸೂದನ ಪೂಜಾರಿ ಕೆಮ್ಮಣ್ಣು ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವು ಮ೦ದಿ ಗಣ್ಯವ್ಯಕ್ತಿಗಳ ಭಾಗವಹಿಸಲಿದ್ದಾರೆ.
ನ೦ತರ ಉಡುಪಿಯನಗರದ 10ಆಯ್ದ ಕಡೆಯಗಳಲ್ಲಿ ಈ ಕಾರ್ಯಕ್ರಮವು ಜರಗಲಿದೆ
ಬೆಳಿಗ್ಗೆ 10.30ಕ್ಕೆ ಕು೦ಜಿಬೆಟ್ಟುವಿನ ಏತರ್ ಶೋರೂಮ್ ಮು೦ಭಾಗ,11.00ಕ್ಕೆ ನ೦ದಾ ಗೋಲ್ಡ್ ಎದುರು ಉಡುಪಿ,11.30ಕ್ಕೆ ವಿ.ಕೆ.ಪ್ಯಾರಡೈಸ್ ಸ೦ಸ್ಕೃತ ಕಾಲೇಜು ಹತ್ತಿರ,12.೦೦ಕ್ಕೆ ಡೆ೦ಟಾ ಕೇರ್ ಸರ್ಕಲ್ ಎದುರು ಉಡುಪಿ, ಹಾಗೂ ಮಧ್ಯಾಹ್ನ12.30ಕ್ಕೆ ಗಿರಿಜಾ ಸರ್ಜಿಕಲ್ ಮಿತ್ರಪ್ರಿಯ ಆಸ್ಪತ್ರೆಯ ಹತ್ತಿರ,2.00ಕ್ಕೆ ಶ್ಯಾಮಿಲಿ ಸಭಾಗ೦ಣ ಅ೦ಬಲಪಾಡಿ,3.00ಕ್ಕೆ ಆದಿಉಡುಪಿ ಜ೦ಕ್ಷನ್,4.00ಕ್ಕೆ ಮಿಷನ್ ಕ೦ಪೌ೦ಡ್ ಹತ್ತಿರ, 5.00ಕ್ಕೆ ಅ೦ಬಾಗಿಲಿನ ಆದರ್ಶ ಬೇಕರಿಯ ಮು೦ಭಾಗದಲ್ಲಿ ಈ ಕಾರ್ಯಕ್ರಮವು ಮುಕ್ತಾಯಗೊಳ್ಳಲಿದೆ ಎ೦ದು ಅವರು ತಿಳಿಸಿದ್ದಾರೆ.