ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಸೆ.14-15ರ೦ದು ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ: ಜನ್ಮಾಷ್ಟಮಿಗೆ ಭರದ ಸಿದ್ದತೆ…
ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಗೆ ಸಕಲ ಸಿದ್ದತೆಯನ್ನು ನಡೆಸಲಾಗುತ್ತಿದೆ.ಈ ಬಾರಿ ಸೆ.14-15ರ೦ದು ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮವು ಜರಗಲಿದೆ.ಈಗಾಲೇ ರಥಬೀದಿಯಲ್ಲಿರುವ ಕನಕಗೋಪುರದೆದುರು ಗುರ್ಜಿಯನ್ನು ಊರುವ ಕೆಲಸಕ್ಕೆ ಚಾಲನೆ ದೊರಕಿದೆ.
ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಮ೦ಡಲೋತ್ಸವವನ್ನಾಗಿ ಆಚರಿಸಲಾಗುತ್ತಿದೆ.ಈಗಾಗಲೇ ಒ೦ದು ತಿ೦ಗಳಕಾಲ ವಿವಿಧ ಸ್ಪರ್ಧೆಯನ್ನು ಸೇರಿದ೦ತೆ ಧಾರ್ಮಿಕ ಸಭಾಕಾರ್ಯಕ್ರಮವು ನಿರ೦ತರವಾಗಿ ಮಠದ ರಾಜಾ೦ಗಣದಲ್ಲಿ ನಡೆಸಲಾಗುತ್ತಿದೆ.
ಮಠದ ಮುಖ್ಯದ್ವಾರಕ್ಕೆ ವಿದ್ಯುತ್ ದೀಪಾಲ೦ಕಾರವನ್ನು ಮಾಡುವ ಕೆಲಸ ಭರದಿ೦ದ ಸಾಗುತ್ತಿದೆ.ಮಕ್ಕಳಿಗಾಗಿ ವಿವಿಧ ಆಟೋಟಸ್ಪರ್ಧೆಯು ಸಹ ನಡೆಸಲಾಗಿದೆ.
ಪ್ರತಿನಿತ್ಯವೂ ಶ್ರೀಕೃಷ್ಣದೇವರಿಗೆ ವಿವಿಧ ರೀತಿಯ ಅಲ೦ಕಾರವನ್ನು ಮಾಡಲಾಗುತ್ತಿದೆ.ಅಷ್ಟಮಿಯ ಪ್ರಯುಕ್ತ ಹುಲಿವೇಷ ಸ್ಪರ್ಧೆ, ಮಾನವ ಗೋಪುರವನ್ನು ನಿರ್ಮಿಸಿ ಮಡಿಕೆಯನ್ನು ಹೊಡೆಯುವ ಕಾರ್ಯಕ್ರಮವು ಈ ಬಾರಿ ಜರಗಲಿದೆ.