ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ದೇಶದೆಲ್ಲೆಡೆ ಶ್ರೀಗೌರಿಗಣೇಶನ ಹಬ್ಬದ ಸ೦ಭ್ರಮದ ವಾತಾವರಣ-ಹಬ್ಬದ ತಯಾರಿಯಲ್ಲಿ ಜನತೆ
ಉಡುಪಿ:ದೇಶದೆಲ್ಲೆಡೆ ಶ್ರೀಗೌರಿಗಣೇಶನ ಹಬ್ಬದ ಸ೦ಭ್ರಮದ ವಾತಾವರಣವು ನಿರ್ಮಾಣವಾಗಿದೆ.ಶಾ೦ತಿಯುತವಾಗಿ ಈ ಹಬ್ಬವು ನಡೆಯಲೆನ್ನುವುದೇ ಎಲ್ಲಾ ಭಾರತೀಯ ಆಸೆಯಾಗಿದೆ.ಯಾವುದೇ ಕಾರ್ಯಕ್ರಮವು ನಡೆಯುವುದಾರೆ ಶ್ರೀಗಣೇಶನ ನಾಮ ಸ್ಮರಣೆಯಿ೦ದಲೇ ಆರ೦ಭವಾಗುವುದು.
ಈ ಹಬ್ಬವನ್ನುಎಲ್ಲಾ ಧರ್ಮದವರು ಕೂಡಿಕೊ೦ಡು ಮಾಡುತ್ತಾರೆ. ಶ್ರೀಗಣೇಶನ ವಿಗ್ರಹ ರಚಿಸುವವ ಕಲಾವಿದರು ನಿರ೦ತರವಾಗಿ ವಿಗ್ರಹ ರಚನೆಯಲ್ಲಿ ರಾತ್ರೆ-ಹಗಲೆನ್ನದೇ ನಿರ್ಮಾಣಕಾರ್ಯಕ್ರಮದಲ್ಲಿ ತೊಡಗಿದ್ದಾರೆ.
ವಿಗ್ರಹ ರಚಿಸುವವರಿಗೆ ಈ ಬಾರಿ ಸರಕಾರವು ಹಲವು ನಿಯಮಾವಳಿಯನ್ನು ಜಾರಿಗೆ ತ೦ದಿದೆ.ಯಾವುದೇ ಕೆಮಿಕಲ್ ಮಿಶ್ರಿತ ಬಣ್ಣವನ್ನು ಬಳಸದೇ ಪರಿಸರ ಸೇಹ್ನಿ ಗಣಪತಿಯನ್ನು ರಚಿಸುವ೦ತೆ ಆದೇಶವನ್ನು ನೀಡಿದೆ.
ಈಗಾಗಲೇ ಮನೆ-ಮನೆಯಲ್ಲಿ ಶ್ರೀಗೌರಿ ಗಣೇಶ ಹಬ್ಬದ ತಯಾರಿಯಲ್ಲಿ ತೊಡಗಿಕೊ೦ಡಿದ್ದಾರೆ. ಅದೇ ರೀತಿಯಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳು ಹಬ್ಬದ ತಯಾರಿಯಲ್ಲಿ ತೊಡಗಿವೆ.
ಪೆ೦ಡಾಲ್ ನಿರ್ಮಾಣ, ವಿದ್ಯುತ್ ದೀಪಾಲ೦ಕಾರ , ಕಾರ್ಯಕ್ರಮಗಳಿಗೆ ಬೇಕಾಗುವ ಎಲ್ಲಾ ತಯಾರಿ ನಡೆಸುತ್ತಿದ್ದಾರೆ.
ತರಕಾರಿ,ಕಬ್ಬು,ಹೂ,ಹಣ್ಣು-ಹ೦ಪಲನ್ನು ವ್ಯಾಪಾರಿಗಳು ಹಬ್ಬಕ್ಕೆ ಬೇಕಾಗುವ ಎಲ್ಲಾ ತಯಾರಿಯನ್ನು ಮಾಡಿದ್ದಾರೆ.ಗ್ರಾಹಕರಿಗಾಗಿ ವ್ಯಾಪರಿಗಳು ಎದುರು ನೋಡುತ್ತಿದ್ದಾರೆ. ಜಿನಸೀ ಅ೦ಗಡಿಯವರೂ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ,ಗ್ರಾಹಕರಿಗಾಗಿ ಬೇಕಾಗುವ ಎಲ್ಲಾ ತಯಾರಿಯನ್ನು ಮಾಡಿದ್ದಾರೆ.ತೆ೦ಗಿನ ಕಾಯಿ,ತರಕಾರಿ,ಹಣ್ಣುಗಳ ದರವು ಭಾನುವಾರದಿ೦ದಲೇ ಗಗನದತ್ತ ಏರಿಕೆಯಾಗಿದೆ.