ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಮಂಗಳೂರು : ನಿದ್ರಿಸುತ್ತಿದೆ ಪಾಲಿಕೆ! – ಆಟೋ ಚಾಲಕನಿಂದ ಆಡಳಿತ ಮಾಡಬೇಕಾದ ಕಾರ್ಯ
ಮಂಗಳೂರು :ಪಾಲಿಕೆ ಆಡಳಿತ ನಿದ್ರಿಸುತ್ತಿರುವಾಗ ಸಾಮಾನ್ಯ ನಾಗರಿಕರು ಸಮಾಜದ ಉನ್ನತಿಗೆ ಕೈಜೋಡಿಸುವ ದೃಷ್ಟಾಂತಗಳು ಜನರಿಂದ ಶ್ಲಾಘಿಸಲ್ಪಡುತ್ತಿದೆ. ಕರಾವಳಿ ವೃತ್ತದ ಬಳಿ, ಆಟೋ ಚಾಲಕ ಬೂಬಣ್ಣ ಮಾದರಿ ಕೆಲಸವೊಂದನ್ನು ಮಾಡಿದ್ದಾರೆ.
ಸರಕಾರ ಅಥವಾ ಮಹಾನಗರ ಪಾಲಿಕೆ ಮಾಡಬೇಕಾದ ಕೆಲಸವನ್ನು, ತಮ್ಮ ದೈನಂದಿನ ದುಡಿಮೆಯಿಂದ ಬದುಕು ಸಾಗಿಸುತ್ತಿರುವ ಬೂಬಣ್ಣ ತಮ್ಮ ಹೊಣೆಗಾರಿಕೆಯಂತೆ ನಿರ್ವಹಿಸಿದ್ದು, ಸ್ಥಳೀಯರ ಮನಗೆದ್ದಿದ್ದಾರೆ. ಕರಾವಳಿ ವೃತ್ತದಲ್ಲಿನ ರಸ್ತೆ ಗುಂಡಿಗಳನ್ನು ಸ್ವತಹ ತಾವೇ ಮುಚ್ಚಿ ಮಾನವೀಯತೆ ಮೆರೆದಿದ್ದಾರೆ. ಇದನ್ನು ಕಂಡ ಜನರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬುಬಣ್ಣ ಅವರ ಈ ನಡೆ ಹಲವರಿಗೆ ಪ್ರೇರಣೆಯಾಗಿದೆ. ಕಳೆದ ವರ್ಷವೂ ಇದೇ ರೀತಿ ಆಟೋ ಚಾಲಕ ಬೂಬಣ್ಣ ಕಾರ್ಯವೆಸಗಿದ್ದರು ಈ ಬಾರಿಯೂ ಇದೇ ಕಾರ್ಯದಲ್ಲಿ ಅವರು ನಿರತರಾಗಿದ್ದು ಇಲ್ಲಿನ ಸಮಸ್ಯೆ ನಿರಂತರವಾಗಿದ್ದರೂ ಪಾಲಿಕೆ ಇನ್ನೂ ಎಚ್ಚರವಾಗದಿರುವುದು ವಿಷಾದದ ಸಂಗತಿ. ಇನ್ನಾದರೂ ಪಾಲಿಕೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲಿ ಎಂದು ಜನರು ಕೇಳಿಕೊಂಡಿದ್ದಾರೆ.