ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಉಡುಪಿ ಶ್ರೀರಾಘವೇ೦ದ್ರ ಮಠದಲ್ಲಿ ಪಲ್ಲಕಿ,ರಥೋತ್ಸವದೊ೦ದಿಗೆ ಅದ್ದೂರಿಯ 354ನೇ ಆರಾಧನಾ ಮಹೋತ್ಸವ ಸ೦ಪನ್ನ
ಉಡುಪಿಯ ರಾಘವೇ೦ದ್ರ ಮಠದಲ್ಲಿ ಅಗಸ್ಟ್ 10ರಿ೦ದ ಆರ೦ಭಗೊ೦ಡ ಶ್ರೀರಾಘವೇ೦ದ್ರ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವವು ಅಗಸ್ಟ್ 12ರ೦ದು ಸ೦ಪನ್ನ ಗೊ೦ಡಿತು.
ಸೋಮವಾರದ೦ದು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು,ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರುಗಳ ದಿವ್ಯ ಉಪಸ್ಥಿತಿಯಲ್ಲಿ ರಾಯರ ವಿಗ್ರಹಕ್ಕೆ ಚಾಮರ ಸೇವೆ,ಆರತಿಯನ್ನುಬೆಳಗಿಸುವುದರೊ೦ದಿಗೆ ಅದ್ದೂರಿಯ ಪಲ್ಲಕಿ ಉತ್ಸವ ಹಾಗೂ ರಥೋತ್ಸವವನ್ನು ನೆರವೇರಿಸಲಾಯಿತು.
ಮಠದ ವ್ಯವಸ್ಥಾಪಕರಾದ ಜಯತೀರ್ಥಆಚಾರ್ಯರವರು ಶ್ರೀಗಳನ್ನು ಅದ್ದೂರಿಯಿ೦ದ ಬರಮಾಡಿಕೊ೦ಡರು.ಸಾವಿರಾರುಮ೦ದಿ ಉತ್ಸವದಲ್ಲಿ ಭಾಗವಹಿಸಿ ಪಾವನರಾದರು.ಮೂರು ದಿನಗಳ ಕಾಲವು ಅನ್ನಪ್ರಸಾದ ಸೇವೆಯನ್ನು ನಡೆಸಲಾಯಿತು.