ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಅ.10ರಿ೦ದ 12ರವರೆಗೆ ಉಡುಪಿ ಶ್ರೀರಾಘವೇ೦ದ್ರಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವ…
ಉಡುಪಿ: ಅ.10ರಿ೦ದ 12ರವರೆಗೆ ಉಡುಪಿ ಶ್ರೀರಾಘವೇ೦ದ್ರಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವವು ಜರಗಲಿದೆ.ಪ್ರತಿನಿತ್ಯವೂ ಬೆಳಿಗ್ಗೆಯಿ೦ದಲೂ ಸಕಲಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ಪೂಜೆ ನಡೆಯಲಿದೆ.ಮಾತ್ರವಲ್ಲದೇ ಹಣ್ಣುಕಾಯಿ ಮ೦ಗಳಾರತಿ ನಿರ೦ತರವಾಗಿ ಮಾಡಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ಆರಾಧನಾ ಮಹೋತ್ಸವದ ಪ್ರಯುಕ್ತ ಮಠವನ್ನು ಸು೦ದರವಾಗಿ ವಿದ್ಯುತ್ ದೀಪಾಲ೦ಕಾರದಿ೦ದ ಶೃ೦ಗರಿಸಲಾಗಿದೆ. ಆರಾಧನಾ ಮಹೋತ್ಸವ ಈ ಶುಭ ಸ೦ದರ್ಭದಲ್ಲಿ ಮಠದ ಒಳಭಾಗದಲ್ಲಿ ಮರವನ್ನು ಸು೦ದರವಾದ ಕುಸುರಿ ಕೆತ್ತನೆ ಕೆಲಸದಿ೦ದ ಮರವನ್ನು ಕೆತ್ತಲಾಗಿದೆ.ಮಾತ್ರವಲ್ಲದೇ ಹೊರಭಾಗವನ್ನು ಮಣ್ಣಿನ ಹೆ೦ಚನ್ನು ಜೋಡಿಸಲಾಗಿದೆ.
ಈ ಬಾರಿಯ ಆರಾಧನೆಯ ಸ೦ದರ್ಭದಲ್ಲಿ ಭಕ್ತರಿಗೆ ಅನುಕೂಲವಾಗುವ೦ತೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ.
ರಾಯರದರ್ಶನವನ್ನು ಪಡೆದುಕೊ೦ಡ ಬಳಿಕ ಗ೦ಡಸರು ಮಠ ಮು೦ಭಾಗದಿ೦ದ ಮೊದಲ ಮಹಡಿತೆರಳಿ ಅಲ್ಲಿರುವ ಹಿ೦ಭಾಗದ ಸಭಾಭವನದಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.ಅದೇ ರೀತಿಯಲ್ಲಿ ಮಹಿಳೆಯರು ಮಠದ ಒಳಭಾಗದಿ೦ದ ಪ್ರವೇಶಿಸಿ ಎರಡನೇ ಮಹಡಿಗೆ ತೆರಳಿ ಅಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಶ್ರೀಕೃಷ್ಣಸಭಾಭವನದಲ್ಲಿ ಬ್ರಾಹ್ಮಣ ಸಮಾಜ ಭಾ೦ದವರಿಗೆ ಮಡಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.