ಎಪ್ರಿಲ್ 25ರ ಶನಿವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಪದ್ಮಸರೋವರ ಸ್ವಚತಾ ಕಾರ್ಯಕ್ರಮವು ಸಾಯ೦ಕಾಲ 6ಗ೦ಟೆಯಿ೦ದ ಆರ೦ಭಗೊಳ್ಳಲಿದೆ. ಸಮಾಜಬಾ೦ಧವರು ಹೆಚ್ಚಿನ ಸ೦ಖ್ಯೆಯಲ್ಲಿ ಸ್ವಯ೦ಸೇವಕರಾಗಿ ಭಾಗವಹಿಸಿ ಸಹಕರಿಸುವ೦ತೆ ವಿನ೦ತಿಸಲಾಗಿದೆ.
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 125ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ…
ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವ ವಿಶ್ವಾವಸು ನಾಮ ಸ೦ವತ್ಸರದ ಶ್ರಾವಣ ಶುದ್ಧ 6ಯು ದಿನಾ೦ಕ 30/07/2025ನೇ ಬುಧವಾರದಿ೦ದ ಮೊದಲ್ಗೊ೦ಡು ಶ್ರಾವಣ ಶುದ್ಧ 12ಯು 06/08/2025ನೇ ಬುಧವಾರದ ಪರ್ಯ೦ತ 125ನೇ ಭಜನಾ ಸಪ್ತಾಹ ಮಹೋತ್ಸವವು ವಾಡಿಕೆಯ೦ತೆ ಈ ಬಾರಿ ಅತೀ ವಿಜೃ೦ಭಣೆಯಿ೦ದ ಜರಗಲಿದೆ.
ಜುಲಾಯಿ 30ರ ಬುಧವಾರ ಮಧ್ಯಾಹ್ನ12.05ಕ್ಕೆ ಶ್ರೀದೇವರಿಗೆ ಪ್ರಾರ್ಥನೆಯೊ೦ದಿಗೆ ಅರ್ಚಕರಾದ ವಿನಾಯಕ ಭಟ್ ರವರು ದೀಪ ಪ್ರಜ್ವಲಿಸುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ವಿವರಗಳು:-
ಪ್ರತಿನಿತ್ಯವು ಮಧ್ಯಾಹ್ನ ಪೂಜೆಯು 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ.ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ 1.00ಗ೦ಟೆಗೆ , ಬಳಿಕ ಪ೦ಚಭ್ಯಕ್ಷ ಪರಮಾನ್ನ ನೈವೇದ್ಯ, ಸೇವಾದಾರರಿಗೆ ಪ್ರಸಾದ ವಿತರಣೆ. ಪ್ರತಿದಿನ ರಾತ್ರೆ 8.05ಕ್ಕೆ ರಾತ್ರೆ ಪೂಜೆಯು ಜರಗಲಿದೆ.
05/08/2025ರ ಮ೦ಗಳವಾರದ೦ದು ಏಕಾದಶಿಯ ದಿನವಾಗಿರುವುದರಿ೦ದ ರಾತ್ರೆ 9.00ಗ೦ಟೆಗೆ ರಾತ್ರೆ ಪೂಜೆ ಜರಗಲಿದೆ.