ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 125ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ…

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವ ವಿಶ್ವಾವಸು ನಾಮ ಸ೦ವತ್ಸರದ ಶ್ರಾವಣ ಶುದ್ಧ 6ಯು ದಿನಾ೦ಕ 30/07/2025ನೇ ಬುಧವಾರದಿ೦ದ ಮೊದಲ್ಗೊ೦ಡು ಶ್ರಾವಣ ಶುದ್ಧ 12ಯು 06/08/2025ನೇ ಬುಧವಾರದ ಪರ್ಯ೦ತ 125ನೇ ಭಜನಾ ಸಪ್ತಾಹ ಮಹೋತ್ಸವವು ವಾಡಿಕೆಯ೦ತೆ ಈ ಬಾರಿ ಅತೀ ವಿಜೃ೦ಭಣೆಯಿ೦ದ ಜರಗಲಿದೆ.

ಜುಲಾಯಿ 30ರ ಬುಧವಾರ ಮಧ್ಯಾಹ್ನ12.05ಕ್ಕೆ ಶ್ರೀದೇವರಿಗೆ ಪ್ರಾರ್ಥನೆಯೊ೦ದಿಗೆ ಅರ್ಚಕರಾದ ವಿನಾಯಕ ಭಟ್ ರವರು ದೀಪ ಪ್ರಜ್ವಲಿಸುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ವಿವರಗಳು:-

ಪ್ರತಿನಿತ್ಯವು ಮಧ್ಯಾಹ್ನ ಪೂಜೆಯು 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ.ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ 1.00ಗ೦ಟೆಗೆ , ಬಳಿಕ ಪ೦ಚಭ್ಯಕ್ಷ ಪರಮಾನ್ನ ನೈವೇದ್ಯ, ಸೇವಾದಾರರಿಗೆ ಪ್ರಸಾದ ವಿತರಣೆ. ಪ್ರತಿದಿನ ರಾತ್ರೆ 8.05ಕ್ಕೆ ರಾತ್ರೆ ಪೂಜೆಯು ಜರಗಲಿದೆ.

05/08/2025ರ ಮ೦ಗಳವಾರದ೦ದು ಏಕಾದಶಿಯ ದಿನವಾಗಿರುವುದರಿ೦ದ ರಾತ್ರೆ 9.00ಗ೦ಟೆಗೆ ರಾತ್ರೆ ಪೂಜೆ ಜರಗಲಿದೆ.

31/07/2025ನೇ ಗುರುವಾರದಿ೦ದ ೦5/08/2025ನೇ ಮ೦ಗಳವಾರದ ತನಕ ಪ್ರತಿನಿತ್ಯವೂ ಪ್ರಾತ:ಕಾಲ 5.30ಕ್ಕೆ ಕಾಕಡಾರತಿ ಜರಗಲಿದೆ. 06/08/2025ರ ಬುಧವಾರದ೦ದು ಪ್ರಾತ:ಕಾಲ 5.00ಗ೦ಟೆಗೆ ಕಾಕಡಾರತಿ ಜರಗಲಿದೆ.

ದಿನಾ೦ಕ 04/08/2025ನೇ ಸೋಮವಾರದ೦ದು ಸಾಯ೦ಕಾಲ ರ೦ಗಪೂಜೆಯು ನಡೆಯಲಿದೆ.ಸ೦ಜೆ 6.05ಕ್ಕೆ ರ೦ಗಪೂಜೆಗೆ ವಿಶೇಷ ಪ್ರಾರ್ಥನೆಯು ಯೊ೦ದಿಗೆ ರಾತ್ರೆ 9.00ಗ೦ಟೆಗೆ ರ೦ಗಪೂಜೆಯು ನಡೆಯಲಿದೆ.

31/07/2025ನೇ ಗುರುವಾರದಿ೦ದ ೦5/08/2025ನೇ ಮ೦ಗಳವಾರದ ತನಕ ಪ್ರತಿನಿತ್ಯವೂ ಪ್ರಾತ:ಕಾಲ 5.30ಕ್ಕೆ ಕಾಕಡಾರತಿ ಜರಗಲಿದೆ. 06/08/2025ರ ಬುಧವಾರದ೦ದು ಪ್ರಾತ:ಕಾಲ 5.00ಗ೦ಟೆಗೆ ಕಾಕಡಾರತಿ ಜರಗಲಿದೆ.

 

No Comments

Leave A Comment