ಉಡುಪಿ: ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ಕಾರ್ತಿಕಮಾಸದಲ್ಲಿ ನಡೆಯಲಿರುವ ಲಕ್ಷದೀಪೋತ್ಸವವು ನವೆ೦ಬರ್ 7ರ ಶುಕ್ರವಾರದ೦ದು ಜರಗಲಿದೆ. ವನಪೂಜೆ,ಮಧ್ಯಾಹ್ನ ಪೂಜೆ,ವನಭೋಜನ,ರಾತ್ರಿಪೂಜೆ, ಕೆರೆಉತ್ಸವದೊ೦ದಿಗೆ ಪೇಟೆ ಉತ್ಸವದೊ೦ದಿಗೆ ಕಟ್ಟೆ ಪೂಜೆ,ರಾತ್ರಿ ಬೀಡಿನಗುಡ್ಡೆಯಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ.

ಉಡುಪಿ: ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ; ಕೇರಳದ ಮೂಲದ ಆರೋಪಿಗಳನ್ನು ಹಿಡಿದ ಸಾರ್ವಜನಿಕರು

ಉಡುಪಿ, ಜು. 26 : ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಮುಖ್ಯ ದ್ವಾರದಲ್ಲಿ ಶನಿವಾರ ಮುಂಜಾನೆ 1.30ಗಂಟೆ  ಸುಮಾರಿಗೆ ಕಳ್ಳತನ ನಡೆಸಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಸಾರ್ವಜನಿಕರು ಹಿಡಿದಿದ್ದಾರೆ.

ದುಷ್ಕರ್ಮಿಗಳು ದೇವಸ್ಥಾನದ ಮುಂಭಾಗದ ಗೇಟ್‌ನ ಬೀಗ ಮುರಿಯಲು ಯತ್ನಿಸಿದ್ದು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಅವರನ್ನು ತಡೆದಾಗ ಅಲ್ಲಿಂದ ಪರಾರಿಯಾಗಿದ್ದಾರೆ.

ಅವರ ಚಟುವಟಿಕೆಗಳಿಂದ ಸಂದೇಹಗೊಂಡ ಭದ್ರತಾ ಸಿಬ್ಬಂದಿ ತಕ್ಷಣವೇ ಪರಿಸರದವರಿಗೆ ಬೊಬ್ಬೆ ಹೊಡೆದು ಎಚ್ಚರಿಸಿದ್ದಾನೆ. ಕಳ್ಳರು ಚಾಕುವಿನಿಂದ ಬೆದರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣವೇ ಭದ್ರತಾ ಸಿಬ್ಬಂದಿ ಸ್ಥಳೀಯ ಭಕ್ತರಿಗೆ ಮಾಹಿತಿ ನೀಡಿದ್ದು, ಅವರು ದೇವಸ್ಥಾನದ ಆವರಣಕ್ಕೆ ಧಾವಿಸಿದ್ದಾರೆ ಎನ್ನಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಬ್ಬರು ವ್ಯಕ್ತಿಗಳು ಕಳ್ಳತನ ನಡೆಸಲು ಯತ್ನಿಸಿರುವುದು ಮತ್ತು ಅವರ ಪರಾರಿಯ ಮಾರ್ಗ ತಿಳಿದುಬಂದಿದೆ. ಈ ಮಾಹಿತಿ ಆಧಾರದ ಮೇಲೆ, ಸ್ಥಳೀಯರು ಹುಡುಕಾಟ ನಡೆಸಿ ಕಡಿಯಾಳಿ ಪೆಟ್ರೋಲ್ ಪಂಪ್ ಬಳಿ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪರಾರಿಯಾಗುವಾಗ ಒಬ್ಬ ಕಳ್ಳ ಕುಸಿದು ಬಿದ್ದಿದ್ದಾನೆ. ಇನ್ನೊಬ್ಬನನ್ನು ಪರಾರಿಯಾಗಲು ಯತ್ನಿಸಿದ್ದು ಬಳಿಕ ಆತನನ್ನೂ ಹಿಡಿಯಲಾಯಿತು. ಇನ್ನು ಕುಸಿದು ಬಿದ್ದ ಕಳ್ಳನಿಗೆ ಕಳ್ಳತನಕ್ಕೆಂದು ತಂದಿದ್ದ ಕಬ್ಬಿಣದ ವಸ್ತು ನೀಡಿ ಸಾರ್ವಜನಿಕರು ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು, ಸಾರ್ವಜನಿಕರ ಸಹಾಯದಿಂದ ಅಸ್ವಸ್ಥನಾದ ಆರೋಪಿಯನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೊಬ್ಬ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಇಬ್ಬರು ಆರೋಪಿಗಳು ಕೇರಳ ಮೂಲದವರು ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ದೇವಸ್ಥಾನದ ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ತ್ವರಿತ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ನಗರ ಠಾಣೆಯ ಪೊಲೀಸರು ತನಿಖೆಯನ್ನು ಮು೦ದುವರಿಸಿದ್ದಾರೆ.

ಸಾರ್ವಜನಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ನ ಮನವಿ ರಾತ್ರೆ ಜೋರಾಗಿ ಮಳೆಬರುವ ಸಮಯ ಇದಾಗಿದ್ದು ಎಲ್ಲರೂ ನಿದ್ದೆಗೆ ಜಾರುವ ಸಮಯವಿದು ಎಲ್ಲರೂ ಶಬ್ಧವಾದಲ್ಲಿ ತಕ್ಷಣವೇ ಕಿಟಕಿಯಿ೦ದ ನೋಡಿ ತಮ್ಮ ತಮ್ಮ ಅಕ್ಕ-ಪಕ್ಕದ ಮನೆಯವರಿಗೆ ಮಾಹಿತಿಯನ್ನು ನಡೆಯಬದುದಾದ ಕಳ್ಳತನವನ್ನು ಹಾಗೂ ಇತರ ಘಟನೆಯನ್ನು ತಪ್ಪಿಸುವವರಾಗಿ ಎ೦ದು ನಮ್ಮ ವಿನ೦ತಿ.

No Comments

Leave A Comment