
ಆಷಾಢ ಏಕಾದರ್ಶಿ:ಉಡುಪಿಯ ಪರ್ಯಾಯ ಮಠದಲ್ಲಿ ಹಾಗೂ ವಿವಿಧ ಮಠದಲ್ಲಿ ಭಕ್ತರಿಗೆ ತಪ್ತಮುದ್ರಾಧಾರಣೆ ಸ೦ಪನ್ನ…
ಉಡುಪಿ:06.07.2025ರ ಭಾನುವಾರದ೦ದು ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ,ಉಡುಪಿ ಇಂದು ಪ್ರಥಮೈಕಾದಶಿ ಪ್ರಯುಕ್ತ ಶ್ರೀಕೃಷ್ಣ ಮಠದ ಭೋಜನಶಾಲೆಯಲ್ಲಿ ಶ್ರೀ ಪುತ್ತಿಗೆ ಪರ್ಯಾಯ ಉಭಯ ಶ್ರೀಪಾದರು ಸಾವಿರಾರು ಭಕ್ತರಿಗೆ ತಪ್ತ ಮುದ್ರಾಧಾರಣೆ ನೆರವೇರಿಸಿದರು.
ಅದೇ ರೀತಿಯಲ್ಲಿ ಕಾಣಿಯೂರು ಮಠದಲ್ಲಿ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಮತ್ತು ಕೃಷ್ಣಾಪುರಮಠದಲ್ಲಿ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಹಾಗೂ ಶಿರೂರು ಮಠದಲ್ಲಿ ಶ್ರೀವೇದವರ್ಧನ ತೀರ್ಥಶ್ರೀಪಾದರು ತಮ್ಮ ಶಿಷ್ಯವರ್ಗದವರಿಗೆ ಹಾಗೂ ಭಕ್ತಜನರಿಗೆ ತಪ್ತ ಮುದ್ರಾಧರಣೆಯನ್ನು ನೀಡಿದರು.
