ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...

ಅಮೆರಿಕಾ ಸ್ವಾತಂತ್ರ್ಯ ದಿನದಂದೇ ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ, ಹೊಸ ಕಾನೂನು ಜಾರಿ

ವಾಷಿಂಗ್ಟನ್: ಪ್ರಮುಖ ತೆರಿಗೆ ಮಸೂದೆ ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ (One Big Beautiful Bill) ಅಮೆರಿಕಾ ಕಾಂಗ್ರೆಸ್‌ ಅನುಮೋದನೆ ನೀಡಿದ ಬೆನ್ನಲ್ಲೇ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿದ್ದು, ಈ ಮೂಲಕ ಮಸೂದೆ ಇದೀಗ ಕಾನೂನು ರೂಪ ಪಡೆದುಕೊಂಡು ಜಾರಿಗೆ ಬಂದಿದೆ.

ಜುಲೈ 04, ಅಮೆರಿಕ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಶ್ವೇತಭವನದಲ್ಲಿ ಅದ್ಧೂರಿ ಸಮಾರಂಭ ನಡೆಯಿತು. ಈ ವೇಳೆ ಒನ್ ಬಿಗ್ ಬ್ಯೂಟಿಫುಲ್ ಮಸೂದೆಗೆ ಟ್ರಂಪ್​ ಅವರು ಸಹಿ ಹಾಕಿದರು.

ಈ ವೇಳೆ ಮಾತನಾಡಿದ ಟ್ರಂಪ್​, ನಮ್ಮ ದೇಶದಲ್ಲಿ ಜನರು ಇಷ್ಟೊಂದು ಸಂತೋಷವಾಗಿರುವುದನ್ನು ನಾನು ಎಂದಿಗೂ ನೋಡಿಲ್ಲ, ಏಕೆಂದರೆ ಹಲವಾರು ವಿಭಿನ್ನ ಗುಂಪುಗಳ ಜನರನ್ನು ನೋಡಿಕೊಳ್ಳಲಾಗುತ್ತಿದೆ. ಮಿಲಿಟರಿ, ಎಲ್ಲಾ ರೀತಿಯ ನಾಗರಿಕರು ಹಾಗೂ ಎಲ್ಲಾ ರೀತಿಯ ಉದ್ಯೋಗಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಮೂಲಕ ಮಸೂದೆಯನ್ನು ಅನುಮೋದನೆ ನೀಡಿದ್ದಕ್ಕಾಗಿ ಹೌಸ್ ಸ್ಪೀಕರ್ ಮೈಕ್ ಜಾನ್ಸನ್ ಮತ್ತು ಸೆನೆಟ್ ಬಹುಮತದ ನಾಯಕ ಜಾನ್ ಥೂನ್ ಅವರಿಗೆ​ ಧನ್ಯವಾದಗಳನ್ನು ಅರ್ಪಿಸಿದರು.

ನೀವು ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ತೆರಿಗೆ ಕಡಿತ, ಅತಿದೊಡ್ಡ ಖರ್ಚು ಕಡಿತ, ಅತಿದೊಡ್ಡ ಗಡಿ ಭದ್ರತಾ ಹೂಡಿಕೆಯನ್ನು ಹೊಂದಿದ್ದೀರಿ ಎಂದರು.

ಮಸೂದೆಯಲ್ಲಿ ಏನಿದೆ?

ಅಮೆರಿಕ ಸರ್ಕಾರದ ಬೊಕ್ಕಸ ತುಂಬಿಸುವ ಮಸೂದೆಯಾಗಿದ್ದು ಸರ್ಕಾರಿ ವೆಚ್ಚ ಇಳಿಸುವ ಉದ್ದೇಶ ಹೊಂದಿದೆ. ಟ್ರಂಪ್ ಅವಧಿಯಲ್ಲಿ ಉದ್ಯಮ ತೆರೆದವರಿಗೆ ತೆರಿಗೆ ಕಡಿತ ಮಾಡಲಾಗುತ್ತದೆ. ಆರೋಗ್ಯ ವಿಮೆ ಹೆಚ್ಚಿಸ್ತಿದ್ದು, 11.8 ಕೋಟಿ ಅಮೆರಿಕನ್ನರಿಗೆ ಸಂಕಷ್ಟವಾಗುವ ಸಾಧ್ಯತೆಯಿದೆ.

ಒಟ್ಟು 5 ಟ್ರಿಲಿಯನ್ ಡಾಲರ್ ರಾಷ್ಟ್ರೀಯ ಸಾಲದ ಯೋಜನೆ ಇದಾಗಿದ್ದು ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಇತರೆ ದೇಶಗಳಿಗೆ ಅಮೆರಿಕದ ಸಹಾಯಧನ ಕಡಿತ ಆಗಲಿದೆ. ಆಹಾರ, ಆರೋಗ್ಯ, ಶಿಕ್ಷಣಕ್ಕೆ ನೀಡುವ ನೆರವಿಗೆ ಕತ್ತರಿ ಬೀಳಲಿದೆ.

ಭಾರತೀಯರಿಗೂ ಅಘಾತ…

ಅಮೆರಿಕದಲ್ಲಿದ್ದು ಭಾರತಕ್ಕೆ ಹಣ ಕಳಿಸಿದರೆ ಶೇ.3.5 ಹೆಚ್ಚು ತೆರಿಗೆ ವಿಧಿಸಲಾಗುತ್ತಿದ್ದು, ಕಾನೂನು ಜಾರಿಯಾಗಿರುವ ಹಿನ್ನೆಲೆಯಲ್ಲಿ ಇದು ಅಂದಾಜು 10-12 ಲಕ್ಷ ಭಾರತೀಯರ ಮೇಲೆ ಪರಿಣಾಮ ಬೀರಲಿದೆ. ಶಿಕ್ಷಣಕ್ಕೆ ಅಮೆರಿಕಾಗೆ ಹೋದರೂ ಹೆಚ್ಚುವರಿ ತೆರಿಗೆ ಕಟ್ಟಬೇಕಾಗುತ್ತದೆ. ಭಾರತವಷ್ಟೇ ಅಲ್ಲ ಇತರೆ ದೇಶದ ವಲಸಿಗರಿಗೂ ಸಂಕಷ್ಟ ಶುರುವಾಗಲಿದೆ.

ಮಸೂದೆ ಮೂಲಕ ಪ್ರಸ್ತಾಪಿಸಲಾಗಿರುವ ಹೊಸ ತೆರಿಗೆಯು ಮುಖ್ಯವಾಗಿ ಅಮೆರಿಕದ ಅನ್ವಯಿಸುತ್ತದೆ. ಇದರಲ್ಲಿ H1B, L1, F1 (ವಿದ್ಯಾರ್ಥಿ ವೀಸಾ) ಹೊಂದಿರುವವರು, ಗ್ರೀನ್ ಕಾರ್ಡ್ ಹೊಂದಿರುವವರು ಮತ್ತು ಇತರ ತಾತ್ಕಾಲಿಕ ವೀಸಾ ಹೊಂದಿರುವವರು ಸೇರಿದ್ದಾರೆ. ಆದರೆ, ಅಮೆರಿಕದ ನಾಗರಿಕರು (US citizens and nationals) ಈ ತೆರಿಗೆಯಿಂದ ಹೊರತಾಗಿರುತ್ತಾರೆ.

ಭಾರತವು ಅಮೆರಿಕದಿಂದ ಅತಿ ಹೆಚ್ಚು ಹಣವನ್ನು ರವಾನೆ ಮೂಲಕ ಪಡೆಯುತ್ತದೆ. ಈ ತೆರಿಗೆಯಿಂದಾಗಿ ಹಣ ರವಾನೆಯ ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಕಂಡುಬರಬಹುದು, ಏಕೆಂದರೆ ಹಣ ಕಳುಹಿಸುವವರ ವೆಚ್ಚ ಹೆಚ್ಚಾಗುತ್ತದೆ.

ಅಮೆರಿಕದಲ್ಲಿ ದುಡಿದ ಹಣವನ್ನು ಭಾರತಕ್ಕೆ ಕಳುಹಿಸಿದರೆ, ಅದರ ಮೇಲೆ ಹೆಚ್ಚಿನ ಪ್ರಮಾಣದ ತೆರಿಗೆ ಬೀಳಲಿದೆ. ರವಾನಿಸುವ ಹಣಕ್ಕೆ ಶೇ.3.5 ರಷ್ಟು ತೆರಿಗೆ ಇರಲಿದೆ. ಅಂದರೆ, ವಲಸಿಗರೊಬ್ಬರು ಅಮೆರಿಕದಿಂದ ಭಾರತಕ್ಕೆ 83 ಸಾವಿರ ರೂಪಾಯಿ ಕಳುಹಿಸಿದಲ್ಲಿ ಅದಕ್ಕೆ 2,900 ತೆರಿಗೆ ಕಡಿತವಾಗಲಿದೆ. ಈ ತೆರಿಗೆಯು ಎಚ್​1ಬಿ, ಎಲ್​-1, ಎಫ್​-1 ವಿಸಾ ಹಾಗೂ ಗ್ರೀನ್​ ಕಾರ್ಡ್​ ಹೊಂದಿರುವವರ ಅನ್ವಯವಾಗಲಿದೆ.

ಭಾರತ ಸೇರಿದಂತೆ ಯಾವುದೇ ದೇಶದಿಂದ ಅಮೆರಿಕಕ್ಕೆ ಕಾನೂನಾತ್ಮಕವಾಗಿ ಬರುವ ವಲಸಿಗ ಇನ್ನು ಮುಂದೆ ಆತನ ಜೊತೆ ಹೆಂಡತಿ ಮತ್ತು ಮಕ್ಕಳನ್ನು ಮಾತ್ರವೇ ಬರಬಹುದು. ಕುಟುಂಬದ ಇತರ ಸದಸ್ಯರಿಗೆ ಈ ಮಸೂದೆ ಅವಕಾಶ ಮಾಡಿಕೊಡುವುದಿಲ್ಲ.

ಗ್ರೀನ್​ ಕಾರ್ಡ್ ಲಾಟರಿ ವ್ಯವಸ್ಥೆ ಮಸೂದೆ ಮೂಲಕ ರದ್ದುಪಡಿಸಲವಾಗಿದೆ. ಗ್ರೀನ್​ ಕಾರ್ಡ್ ಲಾಟರಿ ವ್ಯವಸ್ಥೆ ಕಡಿಮೆ ವಲಸಿಗರು ಬರುವ ದೇಶಗಳಿಗೆ ಅಮೆರಿಕ ನೀಡಿದ್ದ ‘ಆಫರ್​’ ಆಗಿತ್ತು. ಅಂದರೆ, ಅಮೆರಿಕಕ್ಕೆ ವಲಸೆ ಬರಲು ಆಯ್ದ ದೇಶಗಳ ಜನರಿಗೆ ಲಾಟರಿ ಮೂಲಕ ಗ್ರೀನ್ ಕಾರ್ಡ್​ ನೀಡಲಾಗುತ್ತಿತ್ತು. ಹೊಸ ಮಸೂದೆಯು ಡೈವರ್ಸಿಟಿ ವೀಸಾ ಲಾಟರಿ ವ್ಯವಸ್ಥೆಯನ್ನು ರದ್ದು ಮಾಡುತ್ತದೆ.

ಅಮೆರಿಕಕ್ಕೆ ಇನ್ನು ಮುಂದೆ ವಲಸೆ ಹೋಗಬೇಕಾದಲ್ಲಿ ಶಿಕ್ಷಣ ಮತ್ತು ಕೌಶಲ್ಯವನ್ನು ಹೊಂದಿರುವುದು ಕಡ್ಡಾಯವಾಗಲಿದೆ. ಯಾರೆಂದರವರಿಗೆ ಇನ್ನು ಮುಂದೆ ವೀಸಾ ಸಿಗುವುದು ಕಷ್ಟ.

kiniudupi@rediffmail.com

No Comments

Leave A Comment