ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...
ಪಾಕಿಸ್ತಾನದ ವಿರುದ್ಧ ಯುದ್ಧ ವಿರಾಮ ಘೋಷಣೆ- ಬಿಜೆಪಿ ಪಕ್ಷದ ಒಳ ಜಗಳವನ್ನು ಮರೆಮಾಚಲು ತುರ್ತು ಪರಿಸ್ಥಿತಿಯ ಬಗ್ಗೆ ಸುಳ್ಳು ಹೇಳಿಕೆ:ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ:ಕೇಂದ್ರದ ಮೋದಿ ಸರಕಾರವು ಪಾಕಿಸ್ತಾನದ ವಿರುದ್ಧ ಯುದ್ಧ ವಿರಾಮ ಘೋಷಣೆ ರಾಜ್ಯದ ಬಿಜೆಪಿ ಪಕ್ಷದ ಒಳ ಜಗಳವನ್ನು ಮರೆಮಾಚಲು ತುರ್ತು ಪರಿಸ್ಥಿತಿಯ ಬಗ್ಗೆ ಸುಳ್ಳು ಹೇಳಿಕೆ ನೀಡಿ ಜನಸಾಮಾನ್ಯರನ್ನು ಮೋಸಗೊಳಿಸುತ್ತಿರುವ ಬಿಜೆಪಿ ನಾಯಕರು ಎ೦ದು ಸುರೇಶ್ ಶೆಟ್ಟಿ ಬನ್ನಂಜೆಯವರು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ದಿವ೦ಗತ ಶ್ರೀಮತಿ ಇಂದಿರಾ ಗಾಂಧಿಯವರ ಬಗ್ಗೆ ಮಾತನಾಡುವ ನೈತಿಕತೆ ಮೋದಿಯವರಿಗಾಗಲಿ ಅಥವಾ ಯಾವುದೇ ಬಿಜೆಪಿ ನಾಯಕರಿಗಿಲ್ಲ.
ಶ್ರೀಮತಿ ಇಂದಿರಾ ಗಾಂಧಿಯವರು 1971ರಲ್ಲಿ ಪಾಕಿಸ್ತಾನವನ್ನು ಇಬ್ಬಾಗ ಮಾಡಿ ಬಾಂಗ್ಲಾದೇಶವನ್ನು ಸೃಷ್ಟಿಸಿದ್ದರು. ಆಗ ಇಡೀ ವಿಶ್ವವೇ ಶ್ರೀಮತಿ ಗಾಂಧಿಯವರನ್ನು ಹೊಗಳಿ ಕೊಂಡಾಡಿತ್ತು. ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಯುದ್ಧ ವಿರಾಮ ಘೋಷಿಸಲಾಯಿತು. ಇದು ಬಿಜೆಪಿಯ ಕಾರ್ಯಕರ್ತರಲ್ಲಿ ಒಂದು ರೀತಿಯ ಅಸಮಾಧಾನ ವ್ಯಕ್ತವಾಗಿ ಅದನ್ನೆಲ್ಲ ಮರೆಮಾಚಲು ಹಾಗೂ ಕರ್ನಾಟಕದಲ್ಲಿ ಬಿಜೆಪಿಯವರ ಒಳ ಜಗಳ ತಾರಕಕೇರಿದ್ದು ಪಕ್ಷದ ಪರಿಸ್ಥಿತಿ ಚಿಂತಾ ಜನಕವಾಗಿದೆ.
ಇದನ್ನೆಲ್ಲ ಮರೆಮಾಚಲು ತುರ್ತು ಪರಿಸ್ಥಿತಿಯ ವಿಷಯವನ್ನು ಮುಂದಿಟ್ಟು ಶ್ರೀಮತಿ ಇಂದಿರಾ ಗಾಂಧಿಯವರ ವಿರುದ್ಧ ಸುಳ್ಳು ಹೇಳಿಕೆಯನ್ನು ನೀಡುವುದರಲ್ಲಿ ಮಗ್ನರಾಗಿದ್ದಾರೆ. ಶ್ರೀಮತಿ ಇಂದಿರಾ ಗಾಂಧಿಯವರು ಬಂಡವಾಳ ಶಾಹಿಗಳನ್ನು ಮಟ್ಟ ಹಾಕಲು ತುರ್ತು ಪರಿಸ್ಥಿತಿಯನ್ನು ಘೋಷಿಸಿ 20 ಅಂಶದ ಕಾರ್ಯಕ್ರಮವನ್ನು ಜಾರಿಗೆ ತಂದು ಉಳುವವನೇ ಹೊಲದೊಡೆಯ. ಗರೀಬಿ ಹಠಾವು. ಹಿಂದುಳಿದ ವರ್ಗದವರಿಗೆ .ದೀನ ದಲಿತರಿಗೆ. ಎಲ್ಲ ಬಡ ಕುಟುಂಬಗಳಿಗೆ ಬ್ಯಾಂಕ್ ಹಾಗೂ ಇನ್ನಿತರ ಸರಕಾರಿ ನೌಕರಿ ನೀಡುವ ಕಾರ್ಯಕ್ರಮವನ್ನು ಜಾರಿಗೆ ತಂದು. ದೇಶದ ಬಡಜನರ,ರೈತರ,ಮಧ್ಯಮ ವರ್ಗದವರ,ಕಾರ್ಮಿಕರ ಪರವಾಗಿ ಕಾರ್ಯಕ್ರಮವನ್ನು ರೂಪಿಸಿದರು.
ದೇಶದ ಕೋಟಿ ಕೋಟಿ ಜನರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಇದನ್ನು ತಿಳಿದುಕೊಂಡು ಬಿಜೆಪಿ ನಾಯಕರು ಈ ಬಗ್ಗೆ ಮಾತನಾಡಲೀ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು,ಉಡುಪಿ ನಗರಸಭೆಯ ನಾಮನಿರ್ದೇಶಕ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.