ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...
ಮೇಕೆದಾಟು ಯೋಜನೆ: ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸರ್ಕಾರ
ಮೈಸೂರು: ಮೇಕೆದಾಟು ಜಲಾಶಯ ಯೋಜನೆಗೆ ಕುರಿತ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಿದ್ದು, ಇದೀಗ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಈ ಯೋಜನೆ ಜಾರಿಗೆ ಬದ್ಧವಾಗಿರುವ ರಾಜ್ಯ ಸರ್ಕಾರವು, ತಮಿಳುನಾಡಿಗೆ 177.25 ಟಿಎಂಸಿ ಅಡಿ ಪೂರೈಸುವ ಬದ್ಧತೆಯನ್ನು ಹೊರತುಪಡಿಸಿ ಹೆಚ್ಚುವರಿ ನೀರನ್ನು ಬಳಸಲು ಅವಕಾಶ ನೀಡುವಂತೆ ಕೇಂದ್ರ ಮತ್ತು ನ್ಯಾಯಾಲಯಗಳ ಮೇಲೆ ಒತ್ತಡ ಹೇರುತ್ತಿದೆ.
ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡುವ ಆಶಯದೊಂದಿಗೆ ರಾಜ್ಯ ಸರ್ಕಾರ ಇದೀಗ ರಾಮನಗರದಲ್ಲಿ ಕಚೇರಿಯನ್ನು ತೆರೆದಿದೆ.
ಕರ್ನಾಟಕವು ಜೂನ್‌ನಲ್ಲಿ ತಮಿಳುನಾಡಿಗೆ 9 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಬೇಕಿತ್ತು. ಆದರೆ, ಈಗಾಗಲೇ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳೆರಡೂ ತುಂಬಿ ಹರಿಯುತ್ತಿರುವುದರಿಂದ ಈಗಲೇ 21 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಿದೆ.
ಕಾವೇರಿ ನ್ಯಾಯಮಂಡಳಿ ನೀಡಿದ 284 ಟಿಎಂಸಿ ಅಡಿ ನೀರಿನಲ್ಲಿ ರಾಜ್ಯವು ತನ್ನ ಪಾಲನ್ನು ಬಳಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೌದು ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ತಮಿಳುನಾಡು ತನ್ನ ನೀರಾವರಿ ಪ್ರದೇಶವನ್ನು ವಿಸ್ತರಿಸುತ್ತಿದೆಯೇ? ಹೆಚ್ಚುವರಿ ನೀರನ್ನು ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಮ್ಮ ಅಚ್ಚುಕಟ್ಟು ಪ್ರದೇಶವೂ ಶೇ.6 ರಷ್ಟು ಹೆಚ್ಚಾಗಿದೆ. ಯೋಜನೆ ಜಾರಿಗೆ ನಾವು ಸನ್ನದ್ಧರಾಗಿದ್ದೇವೆ. ನ್ಯಾಯಾಲಯದಲ್ಲಿಯೂ ನಮಗೆ ನ್ಯಾಯ ಸಿಗುತ್ತದೆ. ಈಗಾಲೇ ಕನಕಪುರದಲ್ಲಿ ಮೇಕೆದಾಟು ಕಚೇರಿ ತೆರೆದಿದ್ದೇವೆ. ಭೂಸ್ವಾಧೀನ, ಮುಳುಗಡೆಯಾಗುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಎಲ್ಲಿ ಭೂಮಿ ನೀಡಬೇಕು ಎಂದು ನಾವು ತಯಾರಾಗಿದ್ದೇವೆಂದು ತಿಳಿಸಿದರು. ಮೇಕೆದಾಟು ಯೋಜನೆಗೆ ಅಡಿಪಾಯ ಹಾಕುವ ಕೆಲಸವನ್ನು ಸರ್ಕಾರ ಪ್ರಾರೇಭಿಸಿದೆ ಎಂದರು.