ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...

ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನ ಮತ್ತೆ ಬಿಜೆಪಿ ತೆಕ್ಕೆಗೆ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಆಗಿ 19ನೇ ವಾರ್ಡ್ ಸದಸ್ಯೆ ಜ್ಯೋತಿ ಪಾಟೀಲ್ ಆಯ್ಕೆಯಾಗಿದ್ದರೆ 49ನೇ ವಾರ್ಡ್ ಸದಸ್ಯ ಸಂತೋಷ ಚವ್ಹಾಣ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಪಾಲಿಕೆ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು ಮತ್ತು ವಿಧಾನ ಪರಿಷತ್ತು ಸದಸ್ಯರು ಸೇರಿ ಒಟ್ಟು 90 ಜನ ಮತದಾರರು ಇದ್ದು, ಇಂದಿನ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ 87 ಜನರು ಪಾಲ್ಗೊಂಡಿದ್ದರು. ಈ ಪೈಕಿ ಕಾಂಗ್ರೆಸ್​ ನ ಸುವರ್ಣಾ ಕಲಕುಂಟ್ಲಾ ವಿರುದ್ಧ ಬಿಜೆಪಿಯ ಜ್ಯೋತಿ ಪಾಟೀಲ್ ಅವರು 47 ಮತಗಳನ್ನು ಪಡೆದಿದ್ದರೆ ಸಂತೋಷ ಚವ್ಹಾಣ್ ಅವರು ಸಹ 47 ಮತಗಳನ್ನು ಪಡೆದು ಉಪಮೇಯರ್ ಆಗಿ ಆಯ್ಕೆಯಾಗಿದ್ದು ಈ ಮೂಲಕ ಬಿಜೆಪಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

kiniudupi@rediffmail.com

No Comments

Leave A Comment