ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...
ಉಡುಪಿ ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥದ ನಿರ್ಮಾಣಕ್ಕೆ ಮ೦ತ್ರಾಲಯ ಶ್ರೀಗಳಿ೦ದ ಅದ್ದೂರಿಯ ಚಾಲನೆ…
ಉಡುಪಿ:ಉಡುಪಿಯ ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥದ ನಿರ್ಮಾಣಕ್ಕೆ ಭಾನುವಾರದ೦ದು ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ಮ೦ತ್ರಾಲಯದ ಶ್ರೀರಾಘವೇ೦ದ್ರ ಮಠದ ಶ್ರೀಸುಬುಧೇ೦ದ್ರ ತೀರ್ಥಶ್ರೀಪಾದರು ಅದ್ದೂರಿಯ ಚಾಲನೆಯನ್ನು ನೀಡಿದರು.
ಪರ್ಯಾಯ ಶ್ರೀಪುತ್ತಿಗೆಮಠದ ಶ್ರೀಸುಗುಣೇ೦ದ್ರ ತೀರ್ಥ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯದಲ್ಲಿ ಲೋಕಕಲ್ಯಾಣರ್ಥವಾಗಿ,ತಮ್ಮ ಸನ್ಯಾಸ ಸುವರ್ಣಮಹೋತ್ಸವದ ಪ್ರಯುಕ್ತ ಶ್ರೀಕೃಷ್ಣದೇವರಿಗೆ ಸಮರ್ಪಿಸಲು ಸ೦ಕಲ್ಪಿಸುವ ಪಾರ್ಥಸಾರಥಿ ರಥ ಇದಾಗಿದೆ.
ಕಾರ್ಯಕ್ರಮದ ಆರ೦ಭದಲ್ಲಿ ಶ್ರೀಕೃಷ್ಣಮಠದ ತೀರ್ಥಮ೦ಟಪದ ಎದುರುಗಡೆಯಲ್ಲಿ ಶ್ರೀದೇವರುಗಳಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ರಾಜಾ೦ಗಣದಲ್ಲಿ ಈ ಕಾರ್ಯಕ್ರಮ ಸಭಾಕಾರ್ಯಕ್ರಮವು ಜರಗಿತು.
ಸಮಾರ೦ಭದಲ್ಲಿ ಪರ್ಯಾಯ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀಸುಶ್ರೀ೦ದ್ರ ತೀರ್ಥ ಶ್ರೀಪಾದರು ಹಾಗೂ ಮಣಿಪಾಲದ ಮಾಹೆ ವಿವಿಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಉಡುಪಿ,ಕಾಪುವಿಧಾನ ಸಭಾ ಕ್ಷೇತ್ರದ ಶಾಸಕರು ಸೇರಿದ೦ತೆ ಮಠದ ದಿವಾನರಾದ ನಾಗರಾಜ್ ಆಚಾರ್ಯ,ಮಠದ ಪ್ರಸನ್ನ ಆಚಾರ್ಯ,ರತೀಶ್ ತ೦ತ್ರಿ,ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಉಪಾಧ್ಯ ಬಿ.ದೇವಿಪ್ರಸಾದ್ ಶೆಟ್ಟಿ,ತೆ೦ಕರಗುತ್ತು ಸ೦ತೋಷ್ ಶೆಟ್ಟಿ ಮತ್ತಿತರರು ಹಾಜರಿದ್ದರು. ಇದೇ ಸ೦ದರ್ಭದಲ್ಲಿ ಮ೦ತ್ರಾಲಯ ಶ್ರೀಗಳನ್ನು ಅಭಿನ೦ದಿಸುವ ಕಾರ್ಯಕ್ರಮವು ನಡೆಸಲಾಯಿತು.