ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...
ಭಯೋತ್ಪಾದನೆ ಉಲ್ಲೇಖಿಸದ SCO ಡಾಕ್ಯುಮೆಂಟ್ ಅನ್ನು ಭಾರತ ಒಪ್ಪುವುದಿಲ್ಲ: ಜೈಶಂಕರ್
ನವದೆಹಲಿ: ಶಾಂಘೈ ಸಹಕಾರ ಸಂಸ್ಥೆ(SCO)ಯ ರಕ್ಷಣಾ ಸಚಿವರ ಸಭೆಯ ಫಲಿತಾಂಶದ ಡಾಕ್ಯುಮೆಂಟ್ ನಲ್ಲಿ ಭಯೋತ್ಪಾದನೆ ಉಲ್ಲೇಖಿಸಬೇಕು ಎಂದು ಭಾರತ ಬಯಸಿದೆ. ಆದರೆ ಅದು ಒಂದು ಸದಸ್ಯ ರಾಷ್ಟ್ರಕ್ಕೆ ಬೇಕಾಗಿಲ್ಲ ಎಂದು ಶುಕ್ರವಾರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಹೋರಾಡುವುದು SCOನ ಮುಖ್ಯ ಉದ್ದೇಶವಾಗಿರುವುದರಿಂದ ಈ ವಿಷಯದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ದೃಷ್ಟಿಕೋನ ಸರಿಯಾಗಿದೆ ಮತ್ತು ಅದರ ಬಗ್ಗೆ ಉಲ್ಲೇಖವಿಲ್ಲದೆ(ಭಯೋತ್ಪಾದನೆಯ ಬಗ್ಗೆ ಭಾರತದ ಕಳವಳ) ಸಭೆಯ ಡಾಕ್ಯುಮೆಂಟ್ ಅನ್ನು ಸ್ವೀಕರಿಸುವುದಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಪಾಕಿಸ್ತಾನ ಬೆಂಬಲಿತ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತದ ಕಳವಳವನ್ನು ಉಲ್ಲೇಖಿಸದ SCO ಜಂಟಿ ಹೇಳಿಕೆಗೆ ಸಹಿ ಹಾಕಲು ರಾಜನಾಥ್ ಸಿಂಗ್ ಗುರುವಾರ ನಿರಾಕರಿಸಿದ್ದರು.
SCO ರಕ್ಷಣಾ ಸಚಿವರ ಸಮಾವೇಶದಲ್ಲಿ, ಪಾಕಿಸ್ತಾನದ ಕಡೆಯವರು ಭಯೋತ್ಪಾದಕ ದಾಳಿಯನ್ನು ಡಾಕ್ಯುಮೆಂಟ್ ನಲ್ಲಿ ಸೇರಿಸಬೇಕೆಂದು ಸಿಂಗ್ ಒತ್ತಾಯಿಸಿದರು. ಆದರೆ ಶಾಂಘೈ ಸಹಕಾರ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಚೀನಾ ಮತ್ತು ಅದರ ಸರ್ವಕಾಲಿಕ ಸ್ನೇಹಿತನಾದ ಪಾಕಿಸ್ತಾನವು SCO ದಾಖಲೆಯಲ್ಲಿ ಭಯೋತ್ಪಾದನೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದೆ ಎಂದು ಮೂಲಗಳು ತಿಳಿಸಿವೆ.
ಒಮ್ಮತದ ಮೂಲಕ ನಡೆಯುವ SCOನ ಉದ್ದೇಶ ಭಯೋತ್ಪಾದನೆಯನ್ನು ಎದುರಿಸುವುದಾಗಿತ್ತು ಎಂಬ ರಾಜನಾಥ್ ಸಿಂಗ್ ಅವರ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿದ ಜೈಶಂಕರ್,
SCO ಸರ್ವಾನುಮತದಿಂದ ನಡೆಯುತ್ತದೆ. ಆದರೆ ಒಂದು ದೇಶ(ಪಾಕಿಸ್ತಾನ) ಭಯೋತ್ಪಾದನೆಯ ಯಾವುದೇ ಉಲ್ಲೇಖವನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.