ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...

ಅಣ್ವಸ್ತ್ರ ಕೇಂದ್ರಗಳ ಮೇಲೆ ದಾಳಿ: ಅಮೆರಿಕಾ ಎಚ್ಚರಿಕೆಗೆ ಬಗ್ಗದ ಇರಾನ್; ಇಸ್ರೇಲ್‌ ಮೇಲೆ ಬ್ಯಾಲಿಸ್ಟಿಕ್ ಮಿಸೈಲ್‌ಗಳ ಸುರಿಮಳೆ, 23ಕ್ಕೂ ಹೆಚ್ಚು ಜನರಿಗೆ ಗಾಯ..!

ಟೆಹರಾನ್: ತನ್ನ ಅಣ್ವಸ್ತ್ರ ಕೇಂದ್ರಗಳ ಮೇಲೆ ಅಮೆರಿಕಾ ದಾಳಿ ಮಾಡಿ, ಖಡಕ್ ಎಚ್ಚರಿಕೆ ನೀಡಿದ ಬಳಿಕವೂ ಜಗ್ಗದ ಇರಾನ್, ಇಸ್ರೇಲ್ ಮೇಲಿನ ತನ್ನ ದಾಳಿಯನ್ನು ಮತ್ತೆ ಮುಂದುವರೆಸಿದೆ.

ಅಮೆರಿಕ ದಾಳಿ ಬಳಿಕ ಇರಾನ್‌ನ ಮೊದಲ ಪ್ರತೀಕಾರ ಇದಾಗಿದ್ದು, ಇಸ್ರೇಲ್’ನ 10ಕ್ಕೂ ಹೆಚ್ಚು ಸ್ಥಳಗಳ ಮೇಲೆ 30ಕ್ಕೂ ಅಧಿಕ ಖಂಡಾಂತರ ಕ್ಷಿಪಣಿಗಳಿಂದ ದಾಳಿ ನಡೆಸಿದೆ.

ಇಸ್ರೇಲ್‌ನ ಹೈಫಾ ನಗರ, ರಾಜಧಾನಿ ಟೆಲ್ ಅವೀವ್, ಜೆರುಸಲೆಂ ಸೇರಿದಂತೆ 10ಕ್ಕೂ ಹೆಚ್ಚು ನಗರಗಳ ಮೇಲೆ ಮಿಸೈಲ್‌ ಮಳೆ ಸುರಿಸಿದೆ.

ಇರಾನ್‌ನ ಮಿಸೈಲ್‌ಗಳು ನಗರಕ್ಕೆ ಅಪ್ಪಳಿಸುತ್ತಿದ್ದಂತೆ ಇಸ್ರೇಲ್‌ನ ಕೆಲವು ಭಾಗಗಳಲ್ಲಿ ಸೈರನ್‌ ಮೊಳಗಿದ್ದು, ನಾಗರಿಕರನ್ನ ಸುರಕ್ಷಿತ ಸ್ಥಳಗಳು ಮತ್ತು ಬಂಕರ್‌ಗಳಿಗೆ ಸ್ಥಳಾಂತರಿಸಲಾಗಿದೆ.

ಮುಂದಿನ ಸೂಚನೆ ಬರುವವರೆಗೂ ಬಂಕರ್‌ಗಳಿಂದ ಹೊರಗೆ ಬರದಂತೆ ಸೂಚಿಸಲಾಗಿದೆ. ನಾಗರಿಕರನ್ನು ಗುರಿಯಾಗಿಸಿ ಇರಾನ್‌ ನಡೆಸಿದ ಈ ದಾಳಿಯಲ್ಲಿ 23ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಟೆಲ್ ಅವಿವ್‌ನ ರಾಮತ್ ಅವಿವ್ ಪ್ರದೇಶದಲ್ಲಿ ಹಲವಾರು ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿವೆ, ಅಪಾರ್ಟ್‌ಮೆಂಟ್ ಕಟ್ಟಡಗಳ ಮುಂಭಾಗಗಳಲ್ಲಿ ದೊಡ್ಡ ದೊಡ್ಡ ರಂಧ್ರಗಳು ಸೃಷ್ಟಿಯಾಗಿವೆ. ಹಾನಿಗೊಳಗಾದ ಮನೆಗಳ ಪೈಕಿ ಒಂದು ಕಟ್ಟಡವನ್ನು ಕೆಡವಿ, ಪುನರ್ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಹೀಗಾಗಿ ಕಟ್ಟಡದಲ್ಲಿ ಯಾವುದೇ ನಿವಾಸಿಗಳಿರಲಿಲ್ಲ. ಪ್ರಸ್ತುತ ಆಶ್ರಯದಲ್ಲಿರುವವರೆಲ್ಲೂ ಸುರಕ್ಷಿತ ಹಾಗೂ ಆರೋಗ್ಯವಾಗಿದ್ದಾರೆ ಸ್ಥಳೀಯ ಪೊಲೀಸರು ಹೇಳಿದ್ದಾರೆ.

ಕ್ಷಿಪಣಿ ದಾಳಿಗಳು ಇಸ್ರೇಲ್‌ನ ಬೆನ್ ಗುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸಂಶೋಧನಾ ಸೌಲಭ್ಯಗಳು ಮತ್ತು ಬೆಂಬಲ ನೆಲೆಗಳು ಮತ್ತು ವಿವಿಧ ಹಂತದ ನಿಯಂತ್ರಣ ಮತ್ತು ಕಮಾಂಡ್ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ.

ಇರಾನ್‌ನ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿ, ಅಮೆರಿಕವು ಭಾನುವಾರ ಇರಾನ್ ರಾಷ್ಟ್ರದ ಪರಮಾಣು ಕೇಂದ್ರಗಳನ್ನು ಹೊಡೆದುರುಳಿಸುವ ಮೂಲಕ “ಇರಾನ್ ವಿರುದ್ಧ ಅಪಾಯಕಾರಿ ಯುದ್ಧ”ವನ್ನು ಪ್ರಾರಂಭಿಸಿದೆ ಎಂದು ಹೇಳಿದೆ.

ರಾಜತಾಂತ್ರಿಕ ಪ್ರಕ್ರಿಯೆಯ ನಡುವೆಯೇ ರಾಜತಾಂತ್ರಿಕತೆಗೆ ದ್ರೋಹ ಬಗೆದದ್ದು ಅಮೆರಿಕ ಎಂಬುದನ್ನು ಇಡೀ ವಿಶ್ವ ಮರೆಯಬಾರದು” ಎಂದು ತಿಳಿಸಿದೆ.

ಇಸ್ರೇಲ್ ಅನ್ನು “ಜನಾಂಗೀಯ ಹತ್ಯೆ ಮತ್ತು ಕಾನೂನುಬಾಹಿರ” ಎಂದು ಬಣ್ಣಿಸಿರುವ ಅಮೆರಿಕಾ ಹೇಳಿಕೆಯು, “ಇರಾನ್ ವಿರುದ್ಧ ಅಪಾಯಕಾರಿ ಯುದ್ಧ”ವನ್ನು ಪ್ರಾರಂಭಿಸಿದೆ. ಅಮೆರಿಕಾದ ಈ ದಾಳಿಯು ವಿಶ್ವಸಂಸ್ಥೆಯ ಮತ್ತು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ . ಅಮೆರಿಕಾ “ಈ ಘೋರ ಅಪರಾಧದ ಗಂಭೀರ ಪರಿಣಾಮಗಳು ಮತ್ತು ಭೀಕರ ಪರಿಣಾಮಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದೆ ಎಂದು ಹೇಳಿದೆ.

kiniudupi@rediffmail.com

No Comments

Leave A Comment