ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...
‘ನಾನು ಹೇಗೆ ಬದುಕುಳಿದೆನೋ ಗೊತ್ತಿಲ್ಲ’- ದುರಂತದಲ್ಲಿ ಪಾರಾದ ಪ್ರಯಾಣಿಕನ ಮಾತು
ಅಹಮದಾಬಾದ್:ಜೂ. 13ಏರ್ ಇಂಡಿಯಾ ವಿಮಾನ ದುರಂತದಲ್ಲಿ 40 ವರ್ಷದ ಬ್ರಿಟಿಷ್ ಪ್ರಜೆ ರಮೇಶ್ ವಿಶ್ವಾಸ್ ಕುಮಾರ್ ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಜೀವ ಉಳಿಸಿಕೊಂಡ ಅವರು, ಸೀಟ್ ಬೆಲ್ಟ್ ತೆಗೆದು ಎಮರ್ಜೆನ್ಸಿ ಬಾಲಿಗಿಲಿಂದ ಜಿಗಿದೆ ಎಂದು ದುರಂತದಿಂದ ಪಾರಾದ ಕ್ಷಣಗಳನ್ನು ವಿವರಿಸಿದ್ದಾರೆ.
ಅಹಮದಾಬಾದ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಮಾಧ್ಯಮಗಳೊಂದಿಗೆ ಘಟನೆಯಿಂದ ಪಾರಾದ ಬಗ್ಗೆ ಮಾಹಿತಿ ನೀಡಿದರು. ಪ್ರಧಾನಿ ಮೋದಿಯವರು ಘಟನೆ ಹೇಗೆ ಆಯ್ತು ಎಂದು ಕೇಳಿದರು. ನಾನು ಎಲ್ಲವನ್ನು ವಿವರಿಸಿದ್ದೇನೆ ಎಂದಿದ್ದಾರೆ.
ನನ್ನ ಕಣ್ಣ ಮುಂದೆಯೇ ಎಲ್ಲಾ ನಡೆದು ಹೋಯಿತು. ನಾನು ಹೇಗೆ ಬದುಕುಳಿದೆನೋ ಗೊತ್ತಿಲ್ಲ. ನನಗೆ ನಂಬಲು ಆಗ್ತಿಲ್ಲ. ಅಲ್ಲಿ ಕೆಲ ಕ್ಷಣ ನಾನು ಸತ್ತೇ ಹೋಗಿದ್ದೇನೆ ಎಂದು ಅನ್ನಿಸಿತ್ತು. ಆದರೆ ಕಣ್ಣು ಬಿಟ್ಟಾಗ ನಾನು ಬದುಕಿದ್ದೇನೆ ಎಂದು ಗೊತ್ತಾಯ್ತು ಎಂದು ಕರಾಳ ಕ್ಷಣವನ್ನು ಮೆಲುಕು ಹಾಕಿದ್ದಾರೆ.
ವಿಮಾನ ಟೇಕಾಫ್ ಆಗ್ತಿದ್ದಂತೆ ಏನೋ ಸಮಸ್ಯೆ ಆಗಿದೆ ಎಂದು ಗೊತ್ತಾಯ್ತು. 5ರಿಂದ 10 ಸೆಕೆಂಡ್ ವಿಮಾನ ಸ್ಟ್ರಕ್ ಆದಂತೆ ಅನ್ನಿಸಿತು. ವಿಮಾನದ ಒಳಗೆ ಹಸಿರು, ಬಿಳಿ ಬಣ್ಣದ ಲೈಟ್ ಆನ್ ಆಯ್ತು. ಕೆಲವೇ ಸೆಕೆಂಡ್‌ನಲ್ಲಿ ವಿಮಾನ ಕಟ್ಟಡಕ್ಕೆ ಡಿಕ್ಕಿಯಾಯ್ತು. ಬಳಿಕ ವಿಮಾನ ಕಟ್ಟಡದ ಮೇಲಿಂದ ಕೆಳಗೆ ಇಳಿದಿತ್ತು.