ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....

ರಾಜಸ್ಥಾನ: ಬನಾಸ್ ನದಿಯಲ್ಲಿ ಮುಳುಗಿ ಎಂಟು ಯುವಕರು ಸಾವು

ಜೈಪುರ: ರಾಜಸ್ಥಾನದ ಟೊಂಕ್ ಜಿಲ್ಲೆಯ ಬನಾಸ್ ನದಿಯಲ್ಲಿ ಮುಳುಗಿ ಎಂಟು ಯುವಕರು ಸಾವನ್ನಪ್ಪಿದ ದಾರುಣ ಘಟನೆ ಮಂಗಳವಾರ ನಡೆದಿದೆ.

ಇತರ ಮೂವರು ಯುವಕರನ್ನು ರಕ್ಷಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಟೊಂಕ್ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಾಂಗ್ವಾನ್ ಅವರು ಹೇಳಿದ್ದಾರೆ.

25 ರಿಂದ 30 ವರ್ಷ ವಯಸ್ಸಿನ 11 ಯುವಕರ ಗುಂಪು ಸ್ನಾನ ಮಾಡಲು ನದಿಗೆ ಇಳಿದಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ 8 ಯುವಕರು ಸಾವನ್ನಪ್ಪಿದ್ದಾರೆ ಎಂದು ವಿಕಾಸ್ ಸಾಂಗ್ವಾನ್ ಅವರು ತಿಳಿಸಿದ್ದಾರೆ.

ಅವರು ಆಳವಾದ ನೀರಿಗೆ ಹೇಗೆ ಜಾರಿದರು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಮೃತರು ಪಿಕ್ನಿಕ್‌ಗಾಗಿ ಜೈಪುರದಿಂದ ಬಂದಿದ್ದರು ಎಂದು ಅವರು ಹೇಳಿದ್ದಾರೆ.

kiniudupi@rediffmail.com

No Comments

Leave A Comment