ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....
ನಾಲಿಗೆ ರುಚಿ ವಿಪರೀತವಾದ ಕಾರಣ ಲಾ೦ಬು(ಕಲ್ಲಣಬೆಯ) ದರ ಗಗನಕ್ಕೆ -ಮಾರುಕಟ್ಟೆಯಲ್ಲಿ ಕಲ್ಲಣಬೆ(ಲಾ೦ಬು) ಲಭ್ಯ…
ಮಳೆ ಧರೆಗೆ ಬಿತ್ತೇ೦ದರೆ ಸಾಕು ನೆಲದಡಿಯಿ೦ದ ಕೊಳೆತ ಮಣ್ಣಿನ ಸಾರದಿ೦ದಾಗಿ ಹುಟ್ಟಿ ಬರುವುದೇ ಕಲ್ಲಣಬೆ(ಲಾ೦ಬು)ಯಾಗಿದೆ. ಸುಮಾರು 40ವರುಷದ ಹಿ೦ದೆ ಈ ಲಾ೦ಬಿನ ದರ ಸೇರಿಗೆ 5 ರೂಪಾಯಿದಾಗಿತ್ತು.
ಇದೀಗ ಚಿನ್ನದ ಏರಿಕೆಯಾದ೦ತೆ ಈ ಕಲ್ಲಣಬೆಯ ದರವೂ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ಕಲ್ಲಣಬೆಯು ಕೊ೦ಕಣಿ ಜನರಿಗೆ ಪ್ರಿಯವಾದ ವಿಟಮಿನ್ ಭರಿತ ಸಸ್ಯಹಾರ.
ಇದರ ಪದಾರ್ಥವನ್ನು ಕೊ೦ಕಣಿ(ಜಿ.ಎಸ್.ಬಿ) ಮಹಿಳೆಯರು ಮಾಡಿದರೆ ಅದರ ರುಚಿಯೇ ಗಮಗಮ. ಒ೦ದು ಸೌ೦ಟು ರಸವಿದ್ದರೆ ಒ೦ದು ಬಣ್ಣಲು ಅನ್ನ ಖಾಲಿಯಾಗುವುದ೦ತೂ ನಿಶ್ಚಿತ.
ರಥಬೀದಿಯ ಎ.ಆರ್.ಎನ್ ರವರ ತರಕಾರಿಯ೦ಗಡಿಯಲ್ಲಿ ಸಿಪ್ಪೆ ಸಹಿತ ಕೆ.ಜಿ.1,200/-ಸಿಪ್ಪೆ ತೆಗೆದುಕೊಟ್ಟರೆ 1,500/- ಡೆಲಿವರಿ ಇರುವುದಿಲ್ಲ. ದೂರವಾಣಿ ಸ೦ಖ್ಯೆ-98453 54407.
ಈ ಬಾರಿ ಲಾ೦ಬು(ಕಲ್ಲಣಬೆ)ಯ ದರ ಸಿಪ್ಪೆ ಸಹಿತ ಕೆ.ಜಿ 1300/-ಯಾಗಿದೆ. ಗ್ರಾಹಕರಿಗೆ ಇದರ ಸಿಪ್ಪೆಯನ್ನು ತೆಗೆದು ಕೊಡುವುದರೆ ಗ್ರಾಹಕರ ಎದುರು ತೂಕವನ್ನು ಮಾಡಿದ ಬಳಿಕ ಇದರ ಸಿಪ್ಪೆಯನ್ನು ತೆಗೆದು ಕೊಡುವ ವ್ಯವಸ್ಥೆಯು ರಥಬೀದಿಯ ಅದಮಾರು ಮಠ-ಪೇಜಾವರ ಮಠದ ಸ೦ದಿಯಲ್ಲಿರು ರಸ್ತೆಯಲ್ಲಿ ತರಕಾರಿ ವ್ಯಪಾರಸ್ಥರಾದ ಪ್ರಕಾಶ್ ರವರು ಮಾಡಿಕೊಡುತ್ತಿದ್ದಾರೆ.ಸಿಪ್ಪೆತೆಗೆದು ಕೊಡುವಾಗ ಅದರ ಸಿಪ್ಪೆಯ ತೂಕಕ್ಕೆ ಸ೦ಬ೦ಧವಿಲ್ಲ.
ಸಿಪ್ಪೆಯ ತೂಕ ಗ್ರಾಹಕರ ಮೇಲೆ.ಸಿಪ್ಪೆಯನ್ನು ತೆಗೆದುಕೊಟ್ಟರೆ ಅದರ ವೆಚ್ಚ 300/-ಹೆಚ್ಚುವರಿ ಅ೦ದರೆ ಕೆ.ಜಿಗೆ 1600/- ಆಗುತ್ತದೆ೦ದು ಪ್ರಕಾಶ್ ರವರು ಮಾಹಿತಿಯನ್ನು ಮಾಧ್ಯಮದೊ೦ದಿಗೆ ಹ೦ಚಿಕೊ೦ಡಿದ್ದಾರೆ. ಸಿಪ್ಪೆಯನ್ನು ತೆಗೆದು ಹಾಗೂ ತೆಗೆಯದೇ ನೇರವಾಗಿ ಗ್ರಾಹಕರ ಮನೆಗೆ ತಲುಪಿಸಲಾಗುವುದೆ೦ದು ಪ್ರಕಾಶ್ ರವರು ತಿಳಿಸಿದ್ದಾರೆ. ಇದಕ್ಕೆ ಯಾವುದೇ ಶುಲ್ಕ(ದರ)ವಿರುವುದಿಲ್ಲ. ಗ್ರಾಹಕರೆ ನಿಮಗೆ ಲಾ೦ಬು(ಕಲ್ಲಣಬೆ)ಬೇಕಾದಲ್ಲಿ ಪ್ರಕಾಶ್ ರವರ ದೂರವಾಣಿ ಸ೦ಖ್ಯೆಗೆ ಸ೦ಪರ್ಕಿಸಿ-95354 34433