ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಮಿಜೋರಾಂ ಮಾಜಿ ರಾಜ್ಯಪಾಲರಿಂದ ಉಡುಪಿ ಶ್ರೀ ಭಗವಾನ್ ನಿತ್ಯಾನಂದ‌ ಮಂದಿರ ಭೇಟಿ

ಉಡುಪಿ: ಮೇ.30: ಮಿಜೋರಾಂ ರಾಜ್ಯದ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಅವರು ಕವಿ ಮುದ್ದಣ ಮಾರ್ಗದಲ್ಲಿರುವ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರಕ್ಕೆ ಶುಕ್ರವಾರ ಭೇಟಿ ನೀಡಿ ಗುರುದೇವರ ದರ್ಶನ ಪಡೆದರು. ಸನ್ನಿಧಾನದಿಂದ ಶ್ರೀ ಗುರುದೇವರ ಪ್ರಸಾದ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಮಂದಿರದ ವ್ಯವಸ್ಥಾಪಕ ಸುರೇಂದ್ರ ಶೆಟ್ಟಿ ಕೊರಂಗ್ರಪಾಡಿ, ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲಾಧ್ಯಕ್ಷ‌ ರಾಧಾಕೃಷ್ಣ ಮೆಂಡನ್, ಅರ್ಚಕ ಅಮಿತ್ ಶುಕ್ಲಾ, ತಾರಾನಾಥ್ ಮೇಸ್ತ ಶಿರೂರು, ವಿಶ್ವನಾಥ್ ತೊಟ್ಟಂ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment