ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....
ಎಚ್ಎಸ್ ವೆಂಕಟೇಶಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ
ಇತ್ತೀಚೆಗೆ ಚಿತ್ರರಂಗಕ್ಕೆ ಒಂದಾದ ಮೇಲೆ ಒಂದರಂತೆ ಶಾಕ್ಗಳು ಎದುರಾಗುತ್ತಿವೆ. ಈ ಮೊದಲು ನಟ ಹಾಗೂ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ನಿಧನ ಹೊಂದಿದರು. ಇತ್ತೀಚೆಗೆ ನಟ ಶ್ರೀಧರ್ ನಾಯಕ್ ಕೊನೆಯುಸಿರು ಎಳೆದರು. ಈಗ ಕನ್ನಡದ ಗೀತ ಸಾಹಿತಿ, ಸಾಹಿತಿ, ಕವಿ ಕಥೆಗಾರ, ಸಂಭಾಷಣಕಾರ ಎಚ್ಎಸ್ ವೆಂಕಟೇಶಮೂರ್ತಿ ನಿಧನ ಹೊಂದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
1944ರ ಜೂನ್ 23ರಂದು ವೆಂಕಟೇಶಮೂರ್ತಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊದಿಗೆರೆ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರದ್ದು ಮಧ್ಯಮವರ್ಗದ ಕುಟುಂಬ. ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕ ಆದರು. 2000ರಲ್ಲಿ ಅವರು ನಿವೃತ್ತಿ ಹೊಂದಿದರು. ಆ ಬಳಿಕವೂ ಬೆಂಗಳೂರನಲ್ಲೇ ನೆಲಿಸಿದ್ದ ಅವರು, ಬರಹ ಕೃಷಿಯಲ್ಲಿ ತೊಡಗಿಕೊಂಡಿದ್ದರು.
ವೆಂಕಟೇಶಮೂರ್ತಿ ಅವರಿಗೆ ಬಣ್ಣದ ಲೋಕದ ಮೇಲೆ ಒಲವು ಮೂಡಲು ಕಾರಣ ಆಗಿದ್ದು ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು. ಅವರು ಬಾಲ್ಯದಲ್ಲಿ ಇದ್ದಾಗ ಸಾಕಷ್ಟು ಕೃತಿಗಳನ್ನು ಅವರು ಓದುತ್ತಿದ್ದರು. ಅವರು ಕವಿಯಾಗಿ, ನಾಟಕಕಾರನಗಿಯೂ ಗುರುತಿಸಿಕೊಂಡಿದ್ದಾರೆ.