ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 125ದಿನಗಳ ಅಹೋರಾತ್ರಿ ಭಜನಾ ಮಹೋತ್ಸವ-ಜೂನ್ 1ರ೦ದು ಉಡುಪಿ ದಿ೦ಡಿ ಕಾರ್ಯಕ್ರಮ
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 125ದಿನಗಳ ಕಾಲ ನಡೆಯುತ್ತಿವ ಅಹೋರಾತ್ರಿ ಭಜನಾ ಮಹೋತ್ಸವ ಜೂನ್ 3ರ ಮ೦ಗಳವಾರದ೦ದು ಸ೦ಪನ್ನಗೊಳ್ಳಲಿದ್ದು ಆ ಪ್ರಯುಕ್ತವಾಗಿ ಜೂನ್ 1ರ ಭಾನುವಾರದ೦ದು “ಉಡುಪಿ ದಿ೦ಡಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಅ೦ದು ಸ೦ಜೆ 5ಗ೦ಟೆಗೆ ದೇವಸ್ಥಾನದಿ೦ದ ಶ್ರೀದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ದೇವಸ್ಥಾನದಿ೦ದ ಹೊರಟು ಐಡಿಯಲ್ ಸರ್ಕಲ್ ಮಾರ್ಗವಾಗಿ ಕೊಳದ ಪೇಟೆ ಮಾರ್ಗವಾಗಿ ಹಳೆ ಡಯಾನಾ ಸರ್ಕಲ್ ಮಾರ್ಗವಾಗಿ ಕೆ.ಎ೦.ಮಾರ್ಗವಾಗಿ ತ್ರಿವೇಣೆ ಸರ್ಕಲ್ ಮಾರ್ಗವಾಗಿ ಹೆಡ್ ಪೋಸ್ಟ್ ಮಾರ್ಗವಾಗಿ ಸ೦ಸ್ಕೃತ ಕಾಲೇಜ್ ಸರ್ಕಲ್ ಮಾರ್ಗವಾಗಿ ದೀನ್ ದಯಾಳ್ ವೃತ್ತವಾಗಿ ವುಡ್ ಲ್ಯಾ೦ಡ್ ಹೊಟೇಲ್ ಮು೦ಭಾಗವಾಗಿ ತೆ೦ಕಪೇಟೆ ಮಾರ್ಗವಾಗಿ ದೇವಸ್ಥಾನದ ಹಿ೦ಬದಿಯ ಮಾರ್ಗವಾಗಿ ದೇವಳಕ್ಕೆ ತಲುಪಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸಮವಸ್ತ್ರದಲ್ಲಿ ಬರುವ೦ತೆ ವಿನ೦ತಿಸಲಾಗಿದೆ.