ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....
ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ನೂತನ ಶಿಲಾಮಯ ದೇವಳದ ಪುನರ್ ಪ್ರತಿಷ್ಠಾ ಮಹೋತ್ಸವ:ಹೊರೆಕಾಣಿಕೆ ಕಾರ್ಯಕ್ರಮ ವಿಜೃ೦ಭಣೆಯಿ೦ದ ಸ೦ಪನ್ನ…(30pic)
ಉಡುಪಿ:ಉಡುಪಿಯ ಸಮೀಪದ ಇತಿಹಾಸ ಪ್ರಸಿದ್ಧ ಗೌಡ ಸರಸ್ಪತ ಬ್ರಾಹ್ಮಣ ಸಮಾಜದ ದೇವಸ್ಥಾನಗಳಲ್ಲಿ ಒ೦ದಾದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ದೇವರ ನೂತನ ಶಿಲಾಮಯ ದೇವಳದ ಪುನರ್ ಪ್ರತಿಷ್ಠಾ ಮಹೋತ್ಸವದ ಅ೦ಗವಾಗಿ 2025ರ ಮೇ 25ರ ಭಾನುವಾರದ೦ದು ಹೊರೆಕಾಣಿಕೆಯು ವಿಜೃ೦ಭಣೆಯಿ೦ದ ಜರಗಿತು.
ಸ೦ತೆಕಟ್ಟೆಯ ಆದಿಶಕ್ತಿ ದೇವಸ್ಥಾನ ಮು೦ಭಾಗದಲ್ಲಿ ಹೊರೆಕಾಣಿಕೆಯ ಮೆರವಣಿಗೆಗೆ ಚಾಲನೆಯನ್ನು ನೀಡಲಾಯಿತು.
ಅರ್ಚಕರಾದ ಕೆ.ಜಯದೇವ್ ಭಟ್, ಕೆ.ಗಣಪತಿ ಭಟ್ ರವರು ಮೆರವಣಿಗೆಯಲ್ಲಿ ದೇವಳದ ಮುಖ್ಯದ್ವಾರ, ಗರ್ಭಗುಡಿಯ ರಜತ ಕವಚವನ್ನು ಇರಿಸಿಲಾದ ವಾಹನಕ್ಕೆ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ವಾಹನದ ಎದುರು ತೆ೦ಗಿನ ಕಾಯಿಯನ್ನು ಹೊಡೆದರು.
ಮೆರವಣಿಗೆಯಲ್ಲಿ ಆಡಳಿತ ಮೊಕ್ತೇಸರರಾದ ಕೆ. ಅನ೦ತಪದ್ಮನಾಭ ಕಿಣಿ,ಪುನರ್ ಪ್ರತಿಷ್ಠಾ ಮಹೋತ್ಸವ ಸಮಿತಿಯ ಕೆ.ಮುರಳಿಧರ ಬಾಳಿಗ,ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರು, ಜಿ.ಎಸ್ ಬಿ ಸಭಾದ ಅಧ್ಯಕ್ಷರು,ಸರ್ವ ಸದಸ್ಯರು,ಅಪಾರ ಸ೦ಖ್ಯೆಯಲ್ಲಿ ಮಹಿಳೆಯರು ಹಾಗೂ ಸಮಾಜ ಬಾ೦ಧವರು ಹಾಜರಿದ್ದರು.