ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವರ ನೂತನ ಶಿಲಾಮಯ ದೇವಳದ ಪುನರ್ ಪ್ರತಿಷ್ಠಾ ಮಹೋತ್ಸವ ಭರದ ಸಿದ್ದತೆ…

ಕಲ್ಯಾಣಪುರ:ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವರ ನೂತನ ಶಿಲಾಮಯ ದೇವಳದ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ನೂತನ ಕಲಾಮ೦ದಿರದ ಕಟ್ಟಡದ ಕಾಮಗಾರಿಯು ಬಿರುಸಿನಿ೦ದ ನಡೆಯುತ್ತಿದೆ.

ಮೇ.25ರಭಾನುವಾರದ೦ದು ಈ ಕಾರ್ಯಕ್ರಮದ ಹೊರೆಕಾಣಿಕೆ ಸಮರ್ಪಣೆಯ ಕಾರ್ಯಕ್ರಮವು ಊರ-ಪರವೂರ ಭಕ್ತಾಭಿಮಾನಿಗಳಿ೦ದ ನಡೆಯಲಿದ್ದು ಈಗಾಗಲೇ ಈ ಕಾರ್ಯಕ್ರಮ ಸಿದ್ದತೆಯನ್ನು ನಡೆಸಲಾಗುತ್ತಿದೆ. ದೇವಸ್ಥಾನಕ್ಕೆ ತೆರಳುವ ಮುಖ್ಯದ್ವಾರದಿ೦ದ ದೇವಸ್ಥಾನದವರೆಗೆಗೂ ತಗಡಿನ ಚಪ್ಪರವನ್ನು ಹಾಕುವ ಕೆಲಸವ೦ತೂ ರಾತ್ರೆಹಗಲು ನಡೆಯುತ್ತಿದೆ.

ಈಗಾಗಲೇ ನೂತನವಾಗಿ ನಿರ್ಮಿಸಲಾದ ಶಿಲಾಮಯ ದೇವಳದ ಗರ್ಭಗುಡಿ ಹಾಗೂ ಪರಿವಾರ ದೇವರಗುಡಿಯ ಕೆಲಸವು ಅ೦ತಿಮ ಹ೦ತದತ್ತ ಸಿದ್ದತೆ ಭರದಿ೦ದ ಸಾಗುತ್ತಿದೆ.ಈಗಾಗಲೇ ಗರ್ಭಗುಡಿಗೆ ಮರದ ಕೆಲಸ ಹಾಗೂ ತಾಮ್ರದ ತಗಡನ್ನು ಜೋಡಿಸುವ ಕೆಲಸವು ನಡೆಯುತ್ತಿದೆ.

ಹೊರೆಕಾಣಿಕೆ ಹಾಗೂ ಉಗ್ರಾಣದ ಉಸ್ತುವಾರಿ ಸೇರಿದ೦ತೆ ಪ್ರಚಾರದ ಕೆಲಸ ಆಮ೦ತ್ರಣ ಪತ್ರಿಕೆಯನ್ನು ವಿತರಿಸುವ ಕೆಲಸವನ್ನು ಮಾಡಲು ಸಮಿತಿಗಳನ್ನು ರಚಿಸಲಾಗಿದ್ದು ಆಯಾಯ ಸಮಿತಿಯವರು ತಮ್ಮ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊ೦ಡಿದ್ದಾರೆ. ಪುನರ್ ಪ್ರತಿಷ್ಠಾ ಮಹೋತ್ಸವಕ್ಕೆ ಬೇಕಾಗುವ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ಬೇಕಾಗುವ ತಯಾರಿಯನ್ನು ವೈದಿಕರ ತ೦ಡವು ನಡೆಸುತ್ತಿದೆ.

 

No Comments

Leave A Comment