
ನಗರದಲ್ಲಿ ಬ್ಯಾ೦ಕ್ ಗಳ ಎಟಿಎ೦ಗಳಿಗೆ ಬಾಗಿಲು-ಹಣಕ್ಕಾಗಿ ಗ್ರಾಹಕರ ಪರದಾಟ-ಶೀಘ್ರದಲ್ಲಿ ಸಮಸ್ಯೆಗೆ ಸ್ಪ೦ದಿಸಿ ಗ್ರಾಹಕರ ಒತ್ತಾಯ
ಅದೆಷ್ಟೋ ದೊಡ್ಡ-ದೊಡ್ಡ ರಾಷ್ಟ್ರೀಕೃತ ಬ್ಯಾ೦ಕ್ ಗಳು ನಗರದಲ್ಲಿ ನಾಯಿ ಕೊಡೆಗಳ೦ತೆ ಒ೦ದಕ್ಕಿ೦ತ ಒ೦ದು ತಾವು ಮು೦ದು ಎ೦ದು ಸಿಕ್ಕ ಸಿಕ್ಕಲ್ಲಿ ಬ್ಯಾ೦ಕ್ ಗಳ ಎಟಿಎ೦ಗಳನ್ನು ತೆರೆದು ಗ್ರಾಹಕರಿಗೆ ನಮ್ಮದೇ ಸೇವೆ ನೀಡುವ ಮೊದಲ ಬ್ಯಾ೦ಕ್ ಎ೦ದು ಎದೆತಟ್ಟಿಕೊಳ್ಳುತ್ತಿದ್ದ ಬ್ಯಾ೦ಕ್ ಗಳ ಪರಿಸ್ಥಿತಿ ಇ೦ದು ಶ್ವಾಸನಿ೦ತು ಹೋಗಿದೆ.
ಲಕ್ಷಗಟ್ಟಲೇ ಹಣವನ್ನು ಪ್ರಚಾರಕ್ಕೆ ಬಳಸಿ ಎಟಿಎ೦ ಇಷ್ಟನೇಯದ್ದು ಎ೦ಬ ಆಡ೦ಬರಗಳನ್ನು ಮಾಡುತ್ತಿದ್ದವರು ಇ೦ದು ಬಹುತೇಕ ಬ್ಯಾ೦ಕ್ ಗಳ ಎಟಿಎ೦ಗಳಿಗೆ ಬಾಗಿಲು ಹಾಕುವ೦ತಹ ಪರಿಸ್ಥಿತಿಗೆ ಬ೦ದಿದ್ದು ಕಟ್ಟಡದ ಮಾಲಿಕರಿಗೆ ಸ್ಥಳ ಬಾಡಿಗೆಯನ್ನು ನೀಡಲಾಗದ೦ತಹ ಪರಿಸ್ಥಿತಿಗೆ ಬ೦ದು ಬಿಟ್ಟಿದೆ.
ಗ್ರಾಹಕರಿಗೆ ಸೇವೆಯನ್ನು ನೀಡಬೇಕಾದ ಬ್ಯಾ೦ಕ್ ಗಳು ಇ೦ದು ಗ್ರಾಹಕರಿಗೆ ಯಾವುದೇ ಪ್ರಯೋಜನಕ್ಕೆ ಬಾರದ೦ತಹ ಪರಿಸ್ಥಿತಿಗೆ ತಳ್ಳಿದೆ.
ಮೊದಲನೇಯದಾಗಿ ಬ್ಯಾ೦ಕಿನಲ್ಲಿ ಕೆಲಸಮಾಡುವ ನೌಕರರ೦ತೂ ಸ್ಥಳೀಯ ಭಾಷೆ ಬಾರದವರು ಬಹುತೇಕ ಬ್ಯಾ೦ಕ್ ಗಳಲ್ಲಿ ತು೦ಬಿಕೊ೦ಡಿದ್ದಾರೆ. ಮತ್ತೆ ಹಣವನ್ನು ಕಟ್ಟಲು ಹೋದರೆ ಸರ್ವರ್ ಸರಿಯಿಲ್ಲ.ಪಾಸ್ ಬುಕ್ ಎ೦ಟ್ರಿಮಾಡಲು ಹೋದಾಗ ಮೆಷನ್ ಕೆಲಸವನ್ನು ಮಾಡುತ್ತಿಲ್ಲ. ಎಲ್ಲಾ ಸೇವೆಯನ್ನು ನೀಡಬೇಕಾದ ಬ್ಯಾ೦ಕ್ ಇ೦ದು ಯಾವುದೇ ಸೇವೆಯನ್ನು ಕೊಡುವಲ್ಲಿ ಸ೦ಪೂರ್ಣವಾಗಿ ವಿಫಲವಾಗಿದೆ.ನಿರ೦ತರ ರಜೆ ಇದ್ದಾಗ ಗ್ರಾಹಕರು ಹಣಕ್ಕಾಗಿ ಪರದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಟಿಎ೦ಗೆ ಸ್ಥಳವನ್ನು ಕೊಟ್ಟ ಕಟ್ಟಡದ ಮಾಲಿಕರಿಗೂ ಬಾಡಿಗೆ ಸರಿಯಾಗಿ ನೀಡದೇ ಸತಾಯಿಸುತ್ತಿದ್ದಾರೆ.ಈ ಸ್ಥಳವನ್ನು ಬೇರೆಯವರಿಗೆ ಬಾಡಿಗೆಗೆ ಕೊಡಲೆ೦ದು ಹೋದರೆ ಮು೦ದಿನ ದಿನ ಬಾಡಿಗೆಹಣವನ್ನು ನೀಡದೇ ಇರಲು ಸಾಧ್ಯತೆಯಿದೆ ಎ೦ದು ಭಯದಿ೦ದ ಕಟ್ಟಡದ ಮಾಲಿಕರು ಇದ್ದಾರೆ.
ಹಿ೦ದೆ ಎಲ್ಲಾ ಎಟಿಎ೦ಗಳಿಗೆ ಕಾವಲುಗಾರರಿದ್ದರು.ಅದರೆ ಇ೦ದು ಗ್ರಾಹಕರಿಗೆ ಅಗತ್ಯ ಬಿದ್ದಾಗ ಹಣವೂ ಇಲ್ಲ, ಕಾವಲುಗಾರರು ಇಲ್ಲ. ಎಟಿಎ೦ಗಳು ಬಾಗಿಲು ಮುಚ್ಚುವ೦ತ ಪರಿಸ್ಥಿತಿ ಗೆ ಬ್ಯಾ೦ಕ್ ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದೆ.
ಸಿಸಿಕ್ಯಾಮರ,ಎಸಿಗಳು ಮತ್ತು ವಿದ್ಯುತ್ ಬಿಲ್ಲ,ಸೇರಿದ೦ತೆ ಎಟಿಎ೦ ಯ೦ತ್ರಗಳನ್ನು ಹಾಕಲು ಕೋಟಿಗಟ್ಟಲೇ ಹಣವನ್ನು ವೆಚ್ಚಮಾಡಿದ್ದು ಬ್ಯಾ೦ಕಿನ ಹಣದಿ೦ದ ಅಲ್ಲ ಗ್ರಾಹಕರ ಹಣವೆ೦ಬುದು ಬ್ಯಾ೦ಕ್ ಅಧಿಕಾರಿಗಳಿಗೆ ತಿಳಿದಿರಲಿ ಎ೦ಬ ಮಾತು ಇದೀಗ ಗ್ರಾಹಕರಿ೦ದ ದೊಡ್ಡ ಆರೋಪವೊ೦ದು ಎಲ್ಲಾ ರಾಷ್ಟ್ರೀಕೃತ ಬ್ಯಾ೦ಕ್ ಗಳ ಬಾಗಿಲು ತಟ್ಟುತ್ತಿದೆ.
ನಿರ್ವಹಣೆಯ ಎಲ್ಲಾ ವೆಚ್ಚವನ್ನು ಗ್ರಾಹಕರೇ ಭರಿಸುತ್ತಿರುವುದೇ ಹೊರತು ಬ್ಯಾ೦ಕಿನ ಅಧಿಕಾರಿಗಳಲ್ಲ ಎ೦ಬುದು ತಿಳಿದಿರಲಿ.ಈ ಕೊಡಲೇ ಸ೦ಬ೦ಧ ಪಟ್ಟ ಬ್ಯಾ೦ಕ್ ಗಳು ತಮ್ಮತಮ್ಮ ಎಟಿಎ೦ಗಳನ್ನು ಶೀಘ್ರುವೇ ಗ್ರಾಹಕರಿಗೆ ಸರಿಯಾದ ಸೇವೆಯನ್ನು ನೀಡುವ೦ತೆ ಮಾಡಲಿ. ಒ೦ದು ವೇಳೆ ಈ ವ್ಯವಸ್ಥೆಯನ್ನು ತಕ್ಷಣವೇ ಸರಿಪಡಿಸದೇ ಇದ್ದಲ್ಲಿ ಎಟಿಎ೦ ಕಾರ್ಡಗಳನ್ನು ಬ್ಯಾ೦ಕ್ ಮು೦ದೆ ಎಸೆಯುವ ಹ೦ತಕ್ಕೆ ಗ್ರಾಹಕರು ಮು೦ದಾಗಿದ್ದಾರೆ. ಒ೦ದೇ ಶಾಶ್ವತವಾಗಿ ಬಾಗಿಲು ಹಾಕಿ ಅಥವಾ ಗ್ರಾಹಕರಿಗೆ ಸೇವೆಯನ್ನು ನೀಡುವವರಾಗಿ.
ಬ್ಯಾ೦ಕ್ ಗ್ರಾಹಕರಲ್ಲಿ ಫೋನ್ ಪೇ,ಗೂಗಲ್ ಪೇ ವ್ಯವಸ್ಥೆಯಿದ್ದ ಕಾರಣ ಈ ಬಗ್ಗೆ ಬ್ಯಾ೦ಕ್ ಗಳು ಎಟಿಎ೦ಗಳ ಬಗ್ಗೆ ಕಾಳಜಿವಹಿಸುತ್ತಿಲ್ಲವೆ೦ಬ ಮಾತು ಹಿರಿಯ ಬ್ಯಾ೦ಕ್ ಗ್ರಾಹಕರೊಬ್ಬರು ಆರೋಪಿಸಿದ್ದಾರೆ.