ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿಯಲ್ಲೊಂದು ಸೂರ್ಯನ ಬೆಳಕಿನ ವಿಸ್ಮಯ- ಶ್ರೀಪ್ರಸನ್ನ ಸೋಮನಾಥೇಶ್ವರ ದೇವರಿಗೆ ಸೂರ್ಯ ರಶ್ಮಿ ಸ್ಪರ್ಶ

ಉಡುಪಿ ಇಲ್ಲಿನ ರಥಬೀದಿಯ ಶ್ರೀಅನಂತೇಶ್ವರ ದೇವಸ್ಥಾನದ ಹಿಂಬದಿ ಅಯ್ಯಪ್ಪ ಗುಡಿಯ ಪಕ್ಕದಲ್ಲಿರುವ ಶ್ರೀ ಪ್ರಸನ್ನ ಸೋಮನಾಥೇಶ್ವರ ಗುಡಿಯಲ್ಲಿರುವ ಸೋಮನಾಥನಿಗೆ ಕಳೆದ ಮೂರು ದಿನಗಳಿಂದ ಸೂರ್ಯನ ರಶ್ಮಿ ಕಿರಣ ಗಳಿಂದ ಸ್ಪರ್ಶ ಮಾಡುವ ಕ್ಷಣಗಳನ್ನು ಭಕ್ತರು ಕಣ್ತುಂಬ ನೋಡಿದರು. ಅಯೋಧ್ಯೆಯಲ್ಲಿನ ಶ್ರೀರಾಮ ಮೂಲ ವಿಗ್ರಹಕ್ಕೆ ಇದೇ ರೀತಿಯಲ್ಲಿ ಸೂರ್ಯನ ರಶ್ಮಿಕಿರಣ ಒ೦ದು ದಿನ ಸ್ಪರ್ಶಿಸಿದರೆ ಇಲ್ಲಿ ಮೂರು ದಿನಗಳ ಕಿರಣವು ಸ್ಪರ್ಶಿಸುತ್ತಿರುವುದು ಭಾರೀ ಪವಾಡವೇ ಆಗಿದೆ.

ಈ ಪ್ರಕ್ರಿಯೆ ಪ್ರತೀ ವರ್ಷವೂ ಏಪ್ರಿಲ್ 27ರಿಂದ ಮೇ 3 ರ ತನಕ ಈ ರೀತಿಯ ಬೆಳಗಿನ ವೈಭವ (ಕಿರಣ) ದೇವರ ಮೇಲೆ ಬಿದ್ದು ಪ್ರಸನ್ನ ಸೋಮನಾಥೇಶ್ವರ ಪ್ರಜ್ವಲಿಸುತ್ತಿರುವ ದೃಶ್ಯವನ್ನತ್ತು ಬಹಳ ಸು೦ದರವಾಗಿದೆ. ಮೇ 2ರಂದು. ಪೂರ್ಣ ಪ್ರಮಾಣದ ಬೆಳಕು ದೇವರ ತೀರ್ಥ ಜಲಪಾತದಿಂದ ದೇವರ ಮುಖ ಸ್ಪರ್ಶಮಾಡಿ ನಂತರ ಕೆಳಭಾಗದಲ್ಲಿರುವ ಸಾಲಿಗ್ರಾಮಕ್ಕೆ ಬೆಳಕು ಸ್ಪರ್ಶಿಸಿ ನಂತರ ನೆಲಕ್ಕೆ ಬೆಳಕು ಚೆಲ್ಲಿ ಈ ಗುಡಿಯು ಪ್ರಜ್ವಲಿಸುತ್ತದೆ.

ಈ ಪ್ರಕ್ರಿಯೆಯು ಬೆಳಿಗ್ಗೆ 8.15 ರಿಂದ 8.45 ರ ತನಕ ಬೆಳಕು ಗೋಚರಿಸುತ್ತದೆ ಎಂದು ಗುಡಿಯ ಅರ್ಚಕರಾದ ಪ್ರಕಾಶ್ ಭಟ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪತ್ರಕರ್ತರಾದ ಜಯಪ್ರಕಾಶ್ ಕಿಣಿ, ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ರಾಜ್ ಸರಳೇಬೆಟ್ಟು, ಸುರೇಶ್ ಪರ್ಕಳ ಹಾಗೂ ಅಪಾರ ಮ೦ದಿ ಭಕ್ತರು ದೇವಳಕ್ಕೆ ಭೇಟಿ ನೀಡಿ ಬೆಳಕು ಪ್ರಸನ್ನ ಸೋಮನಾಥೇಶ್ವರ ದೇವರ ಬಿಂಬಕ್ಕೆ ಬೆಳಕಿನ ಸ್ಪರ್ಶ ಬೀಳುವುದನ್ನು ಪ್ರತ್ಯಕ್ಷವಾಗಿ ಕಂಡಿದ್ದಾರೆ.

No Comments

Leave A Comment