ಹರಿಯಾಣ, ಗೋವಾ, ಲಡಾಖ್ಗೆ ಹೊಸ ರಾಜ್ಯಪಾಲರ ನೇಮಕ....Poster ಅಂಟಿಸುವ ಮುನ್ನ ಎಚ್ಚರ; Bengaluru Auto Driversಗೆ ಮತ್ತೆ ಶಾಕ್ ಕೊಟ್ಟ RTO ಅಧಿಕಾರಿಗಳು! 5 ಸಾವಿರ ದಂಡ!
ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ; ವೈಭವದ ಪೇಟೆ ಉತ್ಸವ
ಮಲ್ಪೆ; ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ಶ್ರೀ ರಾಮ ದೇವರ ಪ್ರತಿಷ್ಠಾಪನೆ ಗೊಂಡು 25 ವರ್ಷದ ರಜತ ಮೊಹೋತ್ಸವ ಆಚರಣೆ , ಹಾಗೂ ಶ್ರೀ ರಾಮ ನವಮಿ ಮಹೋತ್ಸವ ಆಚರಣೆ ಆದಿತ್ಯವಾರ ನೆಡೆಯಿತು.
ಬೆಳ್ಳಿಗೆ ಶ್ರೀರಾಮಚಂದ್ರ ದೇವರಿಗೆ ಪಂಚಾಮೃತ ಅಭಿಷೇಕ , ಶತ ಕಲಶಾಭಿಷೇಕ , ಕನಕಾಭಿಷೇಕ , ಗಂಗಾಭಿಷೇಕ , ಪಲಾಭಿಷೇಕ , ಹಾಗೂ ಸಾನಿಧ್ಯ ಹವನ , ಶ್ರೀದೇವರಿಗೆ ವಿಶೇಷ ಅಲಂಕಾರ , ಹಾಗೂ ಶ್ರೀರಾಮ ದೇವರಿಗೆ ತೊಟ್ಟಿಲು ಸೇವೆ , ಭಜನಾ ಕಾರ್ಯಕ್ರಮ , ಪಲ್ಲ ಪೂಜೆ , ಮಹಾ ಪೂಜೆ ಬಳಿಕ ಮಹಾ ಸಮಾರಾಧನೆ ಜರಗಿತು.
ವೈಭವದ ಪೇಟೆ ಉತ್ಸವ ; ಸಂಜೆ ಶ್ರೀ ರಾಮ ಮಂದಿರದಿಂದ ಮಲ್ಪೆ ಮುಖ್ಯ ರಸ್ತೆಯಲ್ಲಿ ನೂತನ ರಜತ ಪಲ್ಲಕ್ಕಿಯಲ್ಲಿ ಪ್ರಥಮ ಪೇಟೆ ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ವಿಶೇಷ ಸ್ತಬ್ಧ ಚಿತ್ರ , ತಟ್ಟಿರಾಯ , ಕೀಲುಕುದುರೆ , ಕುಣಿತ ಭಜನೆ , ಗೊಂಬೆ ಬಳಗ , ಚಂಡೆವಾದನ , ವಿವಿಧ ವಾದ್ಯಮೇಳ ಜೊತೆಗೆ ವಿಶೇಷ ಆಕರ್ಷಕ ಮೆರವಣಿಗೆಯ ಪೇಟೆ ಉತ್ಸವ ವೈಭವದಿಂದ ಜರಗಿತು ,ರಾತ್ರಿ ಕಟ್ಟೆ ಪೂಜೆ , ವಸಂತ ಪೂಜೆ , ಅಷ್ಟಾವಧಾನ ಸೇವೆ ಜರಗಿತು.
ಶ್ರೀ ದೇವರ ಸನ್ನಿಧಿಯಲ್ಲಿ ಮಂದಿರದ ಅರ್ಚಕರಾದ ಅರ್ಚಕರಾದ ಶೈಲೇಶ್ ಭಟ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು , ವೇದ ಮೂರ್ತಿ ಜಯದೇವ್ ಭಟ್ , ಲಕ್ಷ್ಮಣ ಭಟ್ ಸಹಕರಿಸಿದರು.
ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ , ಜಿ ಎಸ್ ಬಿ ಮಹಿಳಾ ಮಂಡಳಿ ಅಧ್ಯಕ್ಷ ಶಾಲಿನಿ ಪೈ, ಎಮ್ ದೇವರಾಯ ಭಟ್ , ವಿ ಅನಂತ್ ಕಾಮತ್ , ಸುರೇಂದ್ರ ಭಂಡಾರ್ ಕಾರ್ , ಸುಧೀರ್ ಶೆಣೈ , ಅನಿಲ್ ಕಾಮತ್ , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜಭಾಂದವರು ಉಪಸ್ಥಿತರಿದ್ದರು .