ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
Trump ಹುಚ್ಚಾಟಕ್ಕೆ 10 ಸೆಕೆಂಡ್ ಗಳಲ್ಲಿ 20 ಲಕ್ಷ ಕೋಟಿ ಉಡೀಸ್! ಭಾರತೀಯ ಮಾರುಕಟ್ಟೆಯಲ್ಲಿ ಕಂಡರಿಯದ ನಷ್ಟ
ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಟ್ಯಾರಿಫ್ ಹುಚ್ಚಾಟಕ್ಕೆ ಜಾಗತಿಕ ಷೇರು ಮಾರುಕಟ್ಟೆ ತಲ್ಲಣಿಸಿದ್ದು, ಇದರ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ಕಂಡುಬಂದಿದೆ.
ಏಷ್ಯಾದ ಷೇರುಪೇಟೆಗಳು ಮತ್ತು ಅಮೆರಿಕದ ಷೇರುಪೇಟೆಗಳಲ್ಲಿ ಮಾರಾಟ ಕುಸಿತವು ಗಮನಾರ್ಹ ನಷ್ಟವನ್ನು ಸೂಚಿಸಿದ್ದು, ಸೆನ್ಸೆಕ್ಸ್ 4,000 ಅಂಕ ಕುಸಿತ ದಾಖಲಿಸಿದೆ.
ಟ್ರಂಪ್ ಸುಂಕ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ರಕ್ತಪಾತ ಉಂಟಾಗಿದ್ದು, ಭಾರತೀಯ ಈಕ್ವಿಟಿ ಮಾರುಕಟ್ಟೆ 10 ತಿಂಗಳಲ್ಲೇ ಅತ್ಯಧಿಕ ಕುಸಿತ ಕಾಣುವಂತೆ ಮಾಡಿದೆ. ಇದರ ಜೊತೆಗೆ ಹೂಡಿಕೆದಾರರ 20 ಲಕ್ಷ ಕೋಟಿ ರೂಪಾಯಿಗಳು ಹತ್ತೇ ಸೆಕೆಂಡ್ ಗಳಲ್ಲಿ ನಿರ್ನಾಮವಾಗಿದೆ.
ಸೆನ್ಸೆಕ್ಸ್ ಸುಮಾರು 4,000 ಪಾಯಿಂಟ್‌ಗಳ ಕುಸಿತವನ್ನು ಕಂಡಿದ್ದು, ಕಳೆದ ವಹಿವಾಟಿನ ಅವಧಿಯಿಂದ 3.5% ಕ್ಕಿಂತ ಹೆಚ್ಚು ಕುಸಿತ ಕಂಡಿದೆ, ಆದರೆ ನಿಫ್ಟಿ ಇಂದು ಬೆಳಿಗ್ಗೆ 1,000 ಪಾಯಿಂಟ್‌ಗಳಿಗೂ ಹೆಚ್ಚು ಕುಸಿತ ಕಂಡಿದೆ.
ಅಮೆರಿಕದ ಕೈಗಾರಿಕೆಗಳಿಗೆ “ಸುವರ್ಣ ಯುಗ”ದ ಮುನ್ಸೂಚನೆಯಾಗಿ ಹೇಳಲಾಗುವ ಈ ಟ್ರಂಪ್ ಟ್ಯಾರಿಫ್, ಅಮೇರಿಕಾಗೆ ಅನ್ಯಾಯವಾಗಿದೆ ಎಂದು ಅಧ್ಯಕ್ಷ ಟ್ರಂಪ್ ನಂಬುವ ವ್ಯಾಪಾರ ಪದ್ಧತಿಗಳನ್ನು ರದ್ದುಗೊಳಿಸಲು ಪ್ರಯತ್ನಿಸುತ್ತವೆ. ಸುಂಕಗಳು ದೇಶ-ನಿರ್ದಿಷ್ಟವಾಗಿದ್ದು 50% ವರೆಗೆ ನಿಗದಿಯಾಗುತ್ತಿವೆ. ಭಾರತಕ್ಕೆ 26% ರಷ್ಟು ಸುಂಕ ಘೋಷಿಸಲಾಗಿತ್ತು. ಇದು ರಫ್ತುದಾರರು ಮತ್ತು ವ್ಯಾಪಾರಿಗಳಲ್ಲಿ ಭಯವನ್ನು ಹೆಚ್ಚಿಸಿದೆ.
ಭಾರತೀಯ ಷೇರುಮಾರುಕಟ್ಟೆಯಲ್ಲಿ ‘ರಕ್ತಪಾತ’; ಸೆನ್ಸೆಕ್ಸ್ 4,000 ಅಂಕ ಕುಸಿತ, ಹೂಡಿಕೆದಾರರು ದಿಗ್ಭ್ರಾಂತಿ..!
ವಾರಾಂತ್ಯದ ರಜಾದಿನಗಳ ನಂತರ ಸೋಮವಾರ ಬೆಳಿಗ್ಗೆ 9 ಗಂಟೆಗೆ ವಹಿವಾಟು ಪುನರಾರಂಭವಾದಾಗ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 3, 939.68 ಅಂಕ ಕುಸಿತ ಕಂಡು 71,425.01ಕ್ಕೆ ತಲುಪಿತ್ತು. ಈ ಅವಧಿಯಲ್ಲಿ ನಿಫ್ಟಿ 50ಯು 1,160.8 ಅಂಕಗಳ ಕುಸಿತದೊಂದಿಗೆ 21,743.65ಕ್ಕೆ ತಲುಪಿದೆ.
ಈ ನಡುವೆ ಇಂದು ಬೆಳಿಗ್ಗೆ ರೂಪಾಯಿ ಮೌಲ್ಯವು ಕುಸಿತ ಕಂಡಿದ್ದು, ಡಾಲರ್ ಎದುರು 30 ಪೈಸೆ ಕುಸಿತ ಕಂಡು ಪ್ರತಿ ಡಾಲರ್ ಗೆ ರೂಪಾಯಿ ಮೌಲ್ಯ 85.74ಕ್ಕೆ ತಲುಪಿದೆ.
ಟ್ರಂಪ್ ಅವರ ಸುಂಕಗಳು ಭಾರತೀಯ ಮಾರುಕಟ್ಟೆಗಳಲ್ಲಿ ಭಯವನ್ನು ಉಂಟುಮಾಡುವುದು ಖಚಿತ ಮತ್ತು ಜಾಗತಿಕ ವ್ಯಾಪಾರ ಯುದ್ಧದಿಂದ ತನ್ನ ದೇಶೀಯ ಆರ್ಥಿಕತೆಯನ್ನು ರಕ್ಷಿಸಲು ದೇಶಕ್ಕೆ ಈಗ ಆರ್ಥಿಕ ಸುಧಾರಣೆಗಳು ಬೇಕಾಗುತ್ತವೆ ಎಂದು ವಿಶ್ಲೇಷಕರು ಸೂಚಿಸುತ್ತಾರೆ.