ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ; ಯುಗಾದಿ ಹಬ್ಬದ ಪರ್ವಕಾಲದಲ್ಲಿ “ಗಿಂಡಿನರ್ತನ” ಸೇವೆ

ಉಡುಪಿ:ಮಾ.30: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ಹಾಗೂ ಯುಗಾದಿ ಹಬ್ಬದ ಪರ್ವಕಾಲದಲ್ಲಿ ಭಜನಾ ಆರಾಧ್ಯ ದೇವರಾದ ವಿಠೋಭ ರುಖುಮಾಯಿ ಸನ್ನಿಧಿಯಲ್ಲಿ ಪುರಾಣ ಪ್ರಸಿದ್ಧ “ ಗಿಂಡಿನರ್ತನ ಸೇವೆ “ನಡೆಯಿತು.

ಗಿಂಡಿ ನರ್ತನ ಕಲಾವಿದರಾದ ನಾಡಾ ಸತೀಶ್ ನಾಯಕ್, ಚೇಂಪಿ ರಾಮಚಂದ್ರ ಅನಂತ ಭಟ್ ಉಡುಪಿ , ಪ್ರಶಾಂತ್ ಆಚಾರ್ಯ ಬಸ್ರುರು ಇವರು ಗಿಂಡಿನರ್ತನ ನೆಡೆಸಿಕೊಟ್ಟರು , ಹಿಮ್ಮೇಳನದ ಹಾಡುಗಾರಿಕೆಯಲ್ಲಿ ಸಗ್ರಿ ಗಣೇಶ್ ನಾಯಕ್ , ಸಗ್ರಿ ವಿನೀತ್ ನಾಯಕ್ , ಹಾರ್ಮೋನಿಯಂ ತೋನ್ಸೆ ದತ್ತಾತ್ರೇಯ ಕಿಣಿ  , ತಬಲಾದಲ್ಲಿ ಜಯದೇವ್ ಭಟ್ ಕಲ್ಯಾಣಪುರ ಸಹಕರಿಸಿದರು.

ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್ ,ಮೊಕ್ತೇಸರ ಪಿ ವಿ ಶೆಣೈ ,ಹಾಗೂ ದೇವಳದ ಆಡಳಿತ ಮಂಡಳಿಯ ಸದಸ್ಯರು ವಿವಿಧ ಭಜನಾ ಮಂಡಳಿಯ ಸದಸ್ಯರು, ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜಭಾಂದವರು ಉಪಸ್ಥಿತರಿದ್ದರು.

 

No Comments

Leave A Comment