ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಶ್ರೀ ಕೈವಲ್ಯ ಶ್ರೀಗಳ ಭೇಟಿ

ಉಡುಪಿ:ಮಾ,31: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಇಲ್ಲಿನ ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ಕ್ಕೆ ಯುಗಾದಿಯ ಹಬ್ಬದ ಪರ್ವಕಾಲದಲ್ಲಿ ಸೋಮವಾರ ಶ್ರೀ ಕೈವಲ್ಯ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಶಿವಾನಂದ ಸರಸ್ಪತಿ ಶ್ರೀಪಾದರು ದೇವಳಕ್ಕೆ ಭೇಟಿ ನೀಡಿದರು.

 

 

ದೇವಳದ ವತಿಯಿಂದ ಪೂಜ್ಯ ಶ್ರೀಗಳನ್ನು ಮಂಗಳವಾದ್ಯ , ವೇದಘೋಷ ದೊಂದಿಗೆ ಹಾಗೂ ಪೂರ್ಣ ಕುಂಭ ದಿಂದ ಸ್ವಾಗತಿಸಿ ಬರಮಾಡಿಕೊಂಡು ಪಾದ ಪೂಜೆ ಮಾಡಿ ಫಲ ಪುಷ್ಪ ಕಾಣಿಕೆ ನೀಡಿ ಗೌರವಿಸಲಾಯಿತು , ಸ್ವಾಮೀಜಿಯವರು ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ , ಭಜನಾ ಮೊಹೋತ್ಸವದ ಶ್ರೀ ವಿಠೋಬ ರಖುಮಾಯಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.ದೇವಳದಲ್ಲಿ ಜರಗುವ ಶ್ರೀ ರಾಮನಾಮ ಜಪ ಕೇಂದ್ರಕ್ಕೆ ಭೇಟಿ ನೀಡಿ ಜಪ ಅಭಿಯಾನದ ಪಧಾಧಿಕಾರಿಗಳಿಗೆ ಶುಭ ಹಾರೈಸಿದರು.

ತಮ್ಮ ಅನುಗ್ರಹ ಸಂದೇಶದಲ್ಲಿ ನಮ್ಮ ಹಿರಿಯರ ಪೂರ್ವ ಜನ್ಮದ ಫಲದಿಂದಾಗಿ ಈ ದೇವಾಲಯ ನಿರ್ಮಾಣ ಗೊಂಡಿದೆ. ನಮ್ಮ ಹಿರಿಯರು ಆರಂಭಿಸಿದ ಹರಿನಾಮ ಸಂಕೀರ್ತನೆಗೆ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ನೆಡೆಸುತ್ತಿರುವುದು ಸಂತಸವಾಗಿದೆ. ನಾಮ ಸ್ಮರಣಿ ವೆಂಬುದು ಯಜ್ಞ ಕಾರ್ಯ ಕ್ಕೆ ಸಮನಾಗಿದೆ. ನಿರಂತರ ಭಗವಂತನಾ ಆರಾಧನೆಯಿಂದ ಮುಕ್ತಿ ಪ್ರಾಪ್ತಿ ಗುರುವಿನ ಹಾಗೂ ಶ್ರೀ ದೇವರ ವಿಶೇಷ ಅನುಗ್ರಹ ನಿಮ್ಮಲ್ಲರ ಮೇಲೆ ಸದಾ ಇರಲಿ ಎಂದು ಅನುಗ್ರಹಸಿದರು.

ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್, ವೇದ ಮೂರ್ತಿ ಚೇ೦ಪಿ ರಾಮಚಂದ್ರ ಭಟ್, ದೇವಳದ ಮುಕ್ತೇಸರ ಪಿ ವಿ ಶೆಣೈ , ದೇವಳದ ಭಜನಾ ಮಂಡಳಿಯ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ , ಸಂತೋಷ್ ವಾಗ್ಲೆ, ಆಡಳಿತ ಮಂಡಳಿಯ ಸದಸ್ಯರಾದ ವಸಂತ್ ಕಿಣೆ ,  ಪುಂಡಲೀಕ್ ಕಾಮತ್ ,  ಶಾಂತಾರಾಮ್ ಪೈ , ಗಣೇಶ್ ಕಿಣಿ , ಉಮೇಶ್ ಪೈ , ಕೈಲಾಸನಾಥ ಶೆಣೈ , ನಾರಾಯಣ ಪ್ರಭು , ಅಶೋಕ ಬಾಳಿಗ , ರೋಹಿತಾಕ್ಷ ಪಡಿಯಾರ್ ಹಾಗೂ ವಿವಿಧ ಭಜನಾ ಮಂಡಳಿಯ ಸದಸ್ಯರು , ಜಿ ಎಸ್, ಬಿ ಯುವಕ ,ಮಹಿಳಾ ಮಂಡಳಿಯ ಸದಸ್ಯರು , ಊರ ಪರ-ಊರ ಸಾವಿರಾರು ಸಮಾಜ ಭಾಂದವರು ಉಪಸ್ಥಿತರಿದ್ದರು.

No Comments

Leave A Comment