ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಪನ್ನೀರ್ ಪ್ರಿಯರಿಗೆ ಶಾಕಿಂಗ್ ಸುದ್ದಿ: ಆಹಾರ ಇಲಾಖೆ ಪರೀಕ್ಷೆ ವೇಳೆ ಬ್ಯಾಕ್ಟೀರಿಯಾ ಅಂಶ ಪತ್ತೆ
ಬೆಂಗಳೂರು, ಮಾರ್ಚ್ 26: ಇತ್ತೀಚೆಗೆ ಆಹಾರ ಇಲಾಖೆ ಕಳಪೆ ಆಹಾರ ಪದಾರ್ಥಗಳ ವಿರುದ್ಧ ಸಮರ ಸಾರಿತ್ತು. ರಾಸಾಯನಿಕಗಳ ಬಳಕೆಗಳ ವಿರುದ್ಧ ಚಾಟಿ ಬೀಸಿತ್ತು. ಹೀಗಾಗಿ ಪನ್ನೀರ್ ಸೇರಿ ಇತರೆ ಆಹಾರ ಉತ್ಪನ್ನಗಳ ಸ್ಯಾಂಪಲ್ ಪಡೆದು ಟೆಸ್ಟ್ಗೆ ಒಳಪಡಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಪನ್ನೀರ್ನಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿರುವುದು ದೃಢವಾಗಿದೆ. ಆ ಮೂಲಕ ಪನ್ನೀರ್ ಪ್ರಿಯರಿಗೆ ಆಹಾರ ಇಲಾಖೆ ಶಾಕ್ ನೀಡಿದೆ. ಉಳಿದ ಸ್ಯಾಂಪಲ್ಗಳ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ.
ಪನ್ನೀರ್ನಲ್ಲಿ ಅಸುರಕ್ಷಿತ ಅಂಶ ಪತ್ತೆ
ಕಲಬೆರಕೆ ಹಿನ್ನೆಲೆ ಕಳೆದ ಹಲವು ದಿನಗಳ ಹಿಂದೆ ಬೆಂಗಳೂರು ಸೇರಿ ಹಲವೆಡೆ ಆಹಾರ ಇಲಾಖೆ ಪನ್ನೀರ್ ಸ್ಯಾಂಪಲ್ ಸಂಗ್ರಹಿಸಿತ್ತು. ಆಹಾರ ಗುಣಮಟ್ಟ ಇಲಾಖೆಯಿಂದ ಪನೀರ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಇದೀಗ ಲ್ಯಾಬ್ ರಿಪೋರ್ಟ್ ಆಹಾರ ಇಲಾಖೆ ಕೈಸೇರಿದೆ. ವರದಿಯಲ್ಲಿ ಅಸುರಕ್ಷಿತ ಅಂಶ ಇರೋದು ಪತ್ತೆ ಆಗಿದೆ.
231 ಪನೀರ್ ಸ್ಯಾಂಪಲ್ ಪೈಕಿ 17 ಸ್ಯಾಂಪಲ್ಗಳ ವರದಿ ಬಂದಿದೆ. 17 ಸ್ಯಾಂಪಲ್ ಲ್ಯಾಬ್ ರಿಪೋರ್ಟ್ನಲ್ಲಿ 2 ಅನ್ ಸೇಫ್ ಎಂದು ವರದಿ ಬಂದಿದ್ದು, ಪನ್ನೀರ್ನಲ್ಲಿ ಬ್ಯಾಕ್ಟೀರಿಯಾ ಅಂಶ ಇರೋದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಹಾರ ಇಲಾಖೆಯಿಂದ ಮುಂದುವರೆದ ಸಮರ: ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಘಟಕಗಳ ಮೇಲೆ ದಾಳಿ
ಸದ್ಯ ಇಷ್ಟಕ್ಕೆ ಸುಮ್ಮನಾಗದೇ ಆಹಾರ ಇಲಾಖೆ ಸಮರ ಮುಂದುವರೆದಿದೆ. ಐಸ್ ಕ್ರೀಂ ಘಟಕಗಳಲ್ಲಿ ಸ್ಯಾಂಪಲ್ಸ್ ಸಂಗ್ರಹಕ್ಕೆ ಮುಂದಾಗಿದೆ. ಬೇಸಿಗೆ ಹಿನ್ನೆಲ್ ಅಲರ್ಟ್ ಆಗಿರುವ ಅಧಿಕಾರಿಗಳು, ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಘಟಕಗಳ ಮೇಲೆ ಎಫ್ಎಸ್ಎಸ್ಎಐ ದಾಳಿ ಮಾಡಿದೆ. ನಗರದ ಹಾಗೂ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಆಹಾರ ಇಲಾಖೆ ಅಧಿಕಾರಿಗಳು ಸ್ಯಾಂಪಲ್ ಕಲೆಕ್ಟ್ ಮಾಡಿ ಲ್ಯಾಬ್ಗೆ ಕಳಸಿದೆ.
ಇತ್ತೀಚೆಗೆ ರಾಜಧಾನಿ ಬೆಂಗಳೂರು ಸೇರಿದ್ದಂತೆ ಕರ್ನಾಟಕದಲ್ಲಿ ಎಲ್ಲಡೆ ತಿನ್ನುವ ಆಹಾರಗಳದ್ದೆ ಸದ್ದು ಜೋರಾಗಿತ್ತು. ಯಾವುದು ತಿನ್ನೋದು, ಯಾವುದು ಬಿಡೋದು, ಯಾವುದು ಸೇಫ್, ಯಾವುದು ಅನ್ ಸೇಫ್ ಎಂಬಂತಾಗಿತ್ತು. ಕಳಪೆ ಗುಣಮಟ್ಟದ ವಸ್ತುಗಳು ದಿನೇ ದಿನೇ ಬ್ಯಾನ್ ಲಿಸ್ಟ್ಗೆ ಒಳಪಡುತ್ತಿವೆ. ಇತ್ತೀಚೆಗೆ ಇಡ್ಲಿ ಬಳಿಕ ಬಟಾಣಿಯಲ್ಲೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ ಆಗಿತ್ತು. ಬಳಿಕ ಪನ್ನಿರ್ ಸಿಹಿ ತಿಂಡಿಗಳಲ್ಲೂ ಅಸುರಕ್ಷಿತ ಅಂಶ ಪತ್ತೆಯಾಗಿರುವುದು ಆಹಾರ ಇಲಾಖೆ ವರದಿಯಲ್ಲಿ ಬಯಲಾಗಿದೆ.