ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಕೊಚ್ಚಿಕಾರ್ ರೇಣುಕಾರ೦ಜನ್ ಪೈಯವರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಬೆಳ್ಳಿಯ ತೂಗುದೀಪ ಸಮರ್ಪಣೆ…
ಉಡುಪಿ: ದಿ. ಕೊಚ್ಚಿಕಾರ್ ಡಾಕ್ಟರ್ ಮೋಹನದಾಸ್ ಪೈ ಮತ್ತು ದಿ.ಲೀಲಾಮೋಹನ್ ದಾಸ್ ಪೈ ಹಾಗೂ ಶ್ರೀಮತಿ ರೇಣುಕಾ ಪೈಯವರ ಪತಿಯಾದ ದಿ.ಕೊಚ್ಚಿಕಾರ್ ರ೦ಜನ್ ಪೈ ಯವರ ಸ್ಮರಣಾರ್ಥವಾಗಿ ಮಾರ್ಚ್ 26ರ ಬುಧವಾರದ೦ದು ಶ್ರೀಮತಿ ರೇಣುಕಾ ಪೈಯವರು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ಬೆಳ್ಳಿಯ ತೂಗುದೀಪವನ್ನು ಸಮರ್ಪಿಸಿದರು.
ಕೆ.ಬಾಲಕೃಷ್ಣ ನಾಯಕ್ ರವರು ಕೃಷ್ಣಾರ್ಪಣೆಯ ಕಾರ್ಯಕ್ರಮಕ್ಕೆ ಸಹಕರಿಸಿದರು. ದೇವಳದ ಟ್ರಸ್ಟಿಗಳಾದ ಅಲೆವೂರು ಗಣೇಶ ಕಿಣಿರವರಿಗೆ ರೇಣುಕಾರ೦ಜನ್ ಪೈಯವರು ದೀಪಗಳನ್ನು ಹಸ್ತಾ೦ತರಿಸಿದರು.