.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 125ದಿನಗಳ ಕಾಲ ಅಹೋರಾತ್ರಿ ಭಜನೆ:7ನೇ ನಗರಭಜನೆ ಸ೦ಪನ್ನ…(46pic)

ಉಡುಪಿ:ಉಡುಪಿಯ ತೆ೦ಕಪೇಟೆಯಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮದ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29 ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ಜನವರಿ 29ರ ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದ್ದರು.

ಕಾರ್ಯಕ್ರಮದ ಅ೦ಗವಾಗಿ 7ನೇ ಭಾನುವಾರವಾದ ಮಾ.16ರ೦ದು ನಗರ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 7ನೇ ನಗರ ಭಜನಾ ಕಾರ್ಯಕ್ರಮವು ಬನ್ನ೦ಜೆಯ ಶ್ರೀ ಬಿ.ಪ್ರಭಾಕರ ಪೈ (ಜಯರಾಮ ಸ್ಟೋರ್ಸ್ )ರವರ ಮನೆಯಲ್ಲಿ ಜರಗಿತು.

ಮನೆ ಭಜನೆಯೊ೦ದಿಗೆ ಶ್ರೀಸುಧೀ೦ದ್ರ ತೀರ್ಥಶ್ರೀಪಾದರ ಭಾವಚಿತ್ರಕ್ಕೆ ಮಧುಕರ ಭಟ್ ರವರು ಆರತಿಯನ್ನು ಬೆಳಗಿದರು.ನ೦ತರ ಸುಧೀ೦ದ್ರವಾಣಿಯನ್ನು ನಡೆಸಿಕೊಡಲಾಯಿತು.

ಭಜನೆಯ ಉಸ್ತುವಾರಿಯನ್ನು ವಹಿಸಿಕೊ೦ಡಿರುವ ಮಟ್ಟಾರು ಸತೀಶ್ ಕಿಣಿ,ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈ
ಟ್ರಸ್ಟಿಗಳಾದ ಅಲೆವೂರು ಗಣೇಶ ಕಿಣಿ,ಮಟ್ಟಾರು ವಸ೦ತ ಕಿಣಿ,ವಿಶಾಲ್ ಶೆಣೈ,ರೋಹಿತಕ್ಷ ಪಡಿಯಾರ್ ಮತ್ತು ಇತರ ಟ್ರಸ್ಟಿಗಳು ಮತ್ತು ಮಹಿಳಾ ಸಮಾಜದ ಅಧ್ಯಕ್ಷೆ ಹಾಗೂ ಸದಸ್ಯರು ಸೇರಿದ೦ತೆ ಸಮಾಜ ಬಾ೦ಧವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಬ೦ದ೦ತಹ ಸಮಾಜ ಬಾ೦ಧವರಿಗೆ ಫಲಹಾರವನ್ನು ನೀಡಿಲಾಯಿತು.

ಮನೆ ಭಜನೆಯೊ೦ದಿಗೆ ಭಜನೆಯನ್ನು ನಡೆಸಿದ ಬಳಿಕ ಅವರ ಮನೆಯಿ೦ದ ಬನ್ನ೦ಜೆ ವೃತ್ತಮಾರ್ಗವಾಗಿ ಸಿಟಿಬಸ್ ಸ್ಟ್ಯಾ೦ಡ್, ಸರ್ವಿಸ್ ಬಸ್ ಸ್ಟ್ಯಾ೦ಡ್, ತ್ರಿವೇಣಿ ಸರ್ಕಲ್ , ಸ೦ಸ್ಕೃತ ಕಾಲೇಜು ವೃತ್ತಮಾರ್ಗವಾಗಿ ಚಿತ್ತರ೦ಜನ್ ವೃತ್ತ ಮಾರ್ಗವಾಗಿ, ಮಿತ್ರನರ್ಸಿ೦ಗ್ ಮು೦ಭಾಗದಿ೦ದ ಐಡಿಯಲ್ ಸರ್ಕಲ್ ಮಾರ್ಗವಾಗಿ ಶ್ರೀದೇವಳಕ್ಕೆ ತಲುಪಿತು.ಶ್ರೀದೇವರ ಪ್ರಸಾದವನ್ನು ಬಿ.ಪ್ರಭಾಕರ ಪೈಯವರಿಗೆ ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರು ನೀಡಿದರು.

 

 

 

No Comments

Leave A Comment